Breaking News

ಶಾಲೆಯಲ್ಲೇ ಶಿಕ್ಷಕಿಯೊಂದಿಗೆ ಸಂಭೋಗ ನಡೆಸಿದ ಪ್ರಾಂಶುಪಾಲ ಅಮಾನತು

Spread the love

ಛತ್ತೀಸ್‌ಗಢ: ಛತ್ತೀಸ್‌ಗಢದ ಕಂಕೇರ್‌ನ ಸರ್ಕಾರಿ ಪ್ರೌಢಶಾಲೆಯ ಪ್ರಾಂಶುಪಾಲ ಶಾಲೆಯಲ್ಲೇ ಶಿಕ್ಷಕಿಯ ಜೊತೆ ಲೈಂಗಿಕ ಕ್ರಿಯೆ ನಡೆಸಿ ಸಿಕ್ಕಿಬಿದ್ದು, ಅಮಾನತುಗೊಂಡಿದ್ದಾನೆ.

ಗ್ರಾಮದ ಕೆಲವರು ಕುಟುಕು ಕಾರ್ಯಾಚರಣೆ ನಡೆಸಿ ಶಿಕ್ಷಕನ ಕಾಮಚೇಷ್ಟೆಯನ್ನು ವಿಡಿಯೋ ಮಾಡಿದ್ದಾರೆ. ಪ್ರಾಂಶುಪಾಲ ಮತ್ತು ಮಹಿಳಾ ಸಿಬ್ಬಂದಿಯ ಈ ಕೃತ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಶಾಲೆಯಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಈ ಹಿಂದೆಯೇ ಕೆಲ ಗ್ರಾಮಸ್ಥರು ಆರೋಪಿಸಿದ್ದರು. ಇದೀಗ ಅವರೇ ವಿಡಿಯೋ ಸೆರೆ ಹಿಡಿದು ಕೃತ್ಯ ಬಯಲು ಮಾಡಿದ್ದಾರೆ. ವಿಡಿಯೋದಲ್ಲಿರುವಂತೆ ಆಪಾದಿತ ಪ್ರಾಂಶುಪಾಲ ಅಪರಿಚಿತ ವ್ಯಕ್ತಿಯೊಂದಿಗೆ ಮಾತುಕತೆ ನಡೆಸುತ್ತಿದ್ದು, ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆ ಮಾಡದಂತೆ ಲಂಚ ನೀಡುತ್ತಿದ್ದಾನೆ.

ಘಟನೆ ಕುರಿತು ಗ್ರಾಮಸ್ಥರು ಜಿಲ್ಲಾಧಿಕಾರಿ ಚಂದನ್‌ಕುಮಾರ್‌ಗೆ ದೂರು ನೀಡಿದ್ದರು. ಬಳಿಕ ಶಾಲೆಯ ಆಡಳಿತ ಮಂಡಳಿ ಕೂಡ ಪ್ರಕರಣ ಕುರಿತು ವಿಚಾರಣೆ ನಡೆಸಿದೆ. ಈ ವೇಳೆ ಪ್ರಾಂಶುಪಾಲರನ್ನು ಜಿಲ್ಲಾಧಿಕಾರಿ ಆದೇಶದ ಮೇರೆಗೆ ಅಮಾನತುಗೊಳಿಸಲಾಗಿದೆ. ಈ ಹಿಂದೆಯೂ ಕೂಡ ಶಿಕ್ಷಕನಿಗೆ ಹಲವಾರು ಬಾರಿ ಎಚ್ಚರಿಕೆ ನೀಡಲಾಗಿತ್ತು.

ಅಲ್ಲದೇ ಶಾಲೆಯನ್ನು ತೊರೆಯುವಂತೆಯೂ ಸೂಚಿಸಲಾಗಿತ್ತು. ಇದನ್ನು ಪರಿಗಣಿಸದೇ ಅನೈತಿಕವಾಗಿ ನಡೆದುಕೊಳ್ಳುತ್ತಿದ್ದ ಶಿಕ್ಷಕನನ್ನು ಅಮಾನತು ಶಿಕ್ಷೆಗೆ ಗುರಿಪಡಿಸಲಾಗಿದೆ. ಕೋವಿಡ್ ಅವಧಿಯಲ್ಲಿ ಶೈಕ್ಷಣಿಕ ಸಂಸ್ಥೆಗಳು ಮುಚ್ಚಿ ತರಗತಿಗಳು ನಡೆಯದಿದ್ದಾಗ ಮಹಿಳಾ ಸಿಬ್ಬಂದಿ ಮತ್ತು ಪ್ರಾಂಶುಪಾಲರ ಮಧ್ಯೆ ಅನೈತಿಕ ಸಂಬಂಧ ಬೆಳೆದಿತ್ತು ಎಂದು ಗ್ರಾಮಸ್ಥರು ದೂರಿದ್ದಾರೆ.


Spread the love

About Laxminews 24x7

Check Also

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ

Spread the love ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ