ಬಾಗಲಕೋಟೆ : ಕಾರ್ಯಕ್ರಮವೊಂದರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ರೈತರೊಬ್ಬರ ಮೀಸೆ ತಿರುವಿದ ಫೋಟೊ ಸಾಮಾಜಿಕ ಜಾಲತಾಣಲದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಜಿಲ್ಲೆ ಮುಧೋಳ ನಗರದಲ್ಲಿ ನಿನ್ನೆ ನಡೆದಿದ್ದ ಕಾರ್ಯಕ್ರಮದಲ್ಲಿ ಫೋಟೋವನ್ನು ಸೆರೆ ಹಿಡಿಯಲಾಗಿದೆ.
ಸಿಎಂ ಬಸವರಾಜ ಬೊಮ್ಮಾಯಿ ರಾಮಣ್ಣ ಹಿಪ್ಪರಗಿ ಎಂಬ ರೈತನ ಮೀಸೆ ತಿರುವಿ ಹಾಸ್ಯ ಚಟಾಕಿ ಹಾರಿಸಿದ್ದಾರೆ. ರೈತನ ಕೊರೆ ಮೀಸೆಯನ್ನು ತಿರುವಿ ಮಜಾಕ್ ಮಾಡಿದ್ದಾರೆ. ನಿನ್ನೆ ಏತ ನೀರಾವರಿ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ ವೇಳೆ ಈ ಘಟನೆ ನಡೆದಿದೆ. ಸಿಎಂ ಮೀಸೆ ತಿರುವಿದ ಫೋಟೋ ಈಗ ಎಲ್ಲೇಡೆ ವೈರಲ್ ಆಗಿದೆ.
ಬದಾಮಿಯ ಉಗಲವಾಟ ಗ್ರಾಮದಲ್ಲಿ ನಡೆದ ಏತನೀರಾವರಿ ಯೋಜನೆಗೆ ಶಂಕು ಸ್ಥಾಪನೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಬಸವರಾಜ ಬೊಮ್ಮಾಯಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು.