ಕಲಬುರಗಿ: ದೇವಸ್ಥಾನದಲ್ಲಿನ ರಥೋತ್ಸವ ಸಂದರ್ಭದಲ್ಲಿ ದುರಂತವೊಂದು ಸಂಭವಿಸಿದ್ದು, ಇದರಲ್ಲಿ ಒಬ್ಬ ಸಾವಿಗೀಡಾಗಿದ್ದರೆ, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಲಬುರಗಿ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಈ ಅವಘಡ ಸಂಭವಿಸಿದೆ.
ಈ ದುರಂತದಲ್ಲಿ ಲಕ್ಷ್ಮೀಕಾಂತ್ ಕೆಸಬಳ್ಳಿ (25) ಎಂಬಾತ ಸಾವಿಗೀಡಾಗಿದ್ದು, ಭೀಮಾಶಂಕರ ಪೂಜಾರಿ ಮತ್ತು ಯಂಕಪ್ಪ ನೆಡಲ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಕಲಬುರಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕಲಬುರಗಿ ಜಿಲ್ಲೆಯ ಶಹಬಾದ್ ತಾಲೂಕಿನ ರಾವೂರ ಗ್ರಾಮದ ಶ್ರೀಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವದಲ್ಲಿ ಇಂದು ರಥೋತ್ಸವ ನಡೆಯಿತು. ಈ ಸಂದರ್ಭ ಚಲಿಸುತ್ತಿದ್ದ ರಥದ ಗಾಲಿಗೆ ಸಿಲುಕಿ ಲಕ್ಷ್ಮೀಕಾಂತ್ ಮೃತಪಟ್ಟಿದ್ದಾನೆ. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.