ಮಕ್ಕಳಾಗದ ದಂಪತಿಗಳನ್ನ ಟಾರ್ಗೆಟ್ ಮಾಡಿಕೊಂಡು ವಂಚಿಸುತ್ತಿದ್ದ ಆರೋಪಿಯನ್ನು ಬಸವನಗುಡಿ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಾಡಿಗೆ ತಾಯ್ತನದ ಹೆಸರಿನಲ್ಲಿ ಯಾರದ್ದೋ ಮಕ್ಕಳನ್ನ ನೀಡಿ ವಂಚಿಸುತ್ತಿದ್ದ ಭಾನುಮತಿಯನ್ನು ವಶಕ್ಕೆ ಪಡೆಯಲಾಗಿದೆ.
ವೃತ್ತಿಯಲ್ಲಿ ವಕೀಲೆಯಾಗಿದ್ದ ಭಾನುಮತಿ, ಮಕ್ಕಳ ಕಳ್ಳತನ ಪ್ರಕರಣದ ಆರೋಪಿಗಳ ಜೊತೆ ಸಂಪರ್ಕ ಹೊಂದಿದ್ದಳು.
ಪೋಷಕರನ್ನ ಪುಸಲಾಯಿಸಿ, ಕದ್ದು ಮಕ್ಕಳನ್ನ ತಂದು ಇತರ ಆರೋಪಿಗಳು ಭಾನುಮತಿಗೆ ನೀಡುತ್ತಿದ್ದರು.
ಮಕ್ಕಳಿಲ್ಲದ ದಂಪತಿಗೆ ಬಾಡಿಗೆ ತಾಯ್ತನದ ಹೆಸರಿನಲ್ಲಿ ಯಾರದ್ದೋ ಮಕ್ಕಳನ್ನ ನೀಡಿ ವಂಚನೆ ಮಾಡುತ್ತಿದ್ದರು ಎನ್ನಲಾಗಿದೆ.
Laxmi News 24×7