ಬಾಗಲಕೋಟೆ: ಪಿಎಂ ಕಿಸಾನ್ ಫಲಾನುಭವಿಗಳಿಗೆ ಕಿಸಾನ್ ಕ್ರೇಡಿಟ್ ಕಾರ್ಡ ವಿತರಣೆಗೆ ಏಪ್ರೀಲ್ 24 ರಿಂದ ಮೇ 1 ವರೆಗೆ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿರುವ ಅವರು ನಬಾರ್ಡ ವತಿಯಿಂದ ಕಿಸಾನ್ ಭಾಗಿದಾರಿ ಪ್ರಾಥಮಿಕ್ತಾ ಹಮಾರಿ ಅಭಿಯಾನದ ಅಂಗವಾಗಿ ಕಿಸಾನ್ ಕ್ರೆಡಿಟ್ ಕಾರ್ಡ ವಿತರಣೆಗೆ ಆಂದೋಲನ ಹಮ್ಮಿಕೊಳ್ಳಲಾಗಿದೆ.
ಆಂದೋಲದಲ್ಲಿ ಅರ್ಹ ಫಲಾನುಭವಿಗಳಿಗೆ ಇದರ ಪ್ರಯೋಜನವಾಗಲಿದೆ. ಜಿಲ್ಲೆಯಲ್ಲಿ ಒಟ್ಟು 220141 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ ಬಾಗಲಕೋಟೆ ಡಿಸಿಸಿ ಬ್ಯಾಂಕ ನಿಂದ 3,70,809, ಕೆವಿಜಿ ಬ್ಯಾಂಕ್ ವತಿಯಿಂದ 56,315, ವಾಣಿಜ್ಯ ಬ್ಯಾಂಕಗಳಿಂದ 67,584 ಬೆಳೆಸಾಲದ ಕಿಸಾನ್ ಕ್ರೆಡಿಟ್ ಕಾರ್ಡ ಸವಲತ್ತನ್ನು ಒದಗಿಸಿದ್ದಾರೆ. ಪಶುಸಂಗೋಪನೆಗಾಗಿ 5,173 ಮೀನುಗಾರಿಕೆಗಾಗಿ 243 ಕೆಸಿಸಿ ಸವಲತ್ತನ್ನು ಒದಗಿಸಲಾಗಿದೆ. ಸದರಿ ಕಾರ್ಯಕ್ರಮದಲ್ಲಿ ಪಂಚಾಯತ ರಾಜ್, ಕೃಷಿ ಸಂಬಂಧಿತ ಇಲಾಖೆಗಳು, ಸಿಎಸ್ಸಿ ಹಾಗೂ ಬ್ಯಾಂಕಿಂಗ ರವರು ಬಾಗವಹಿಸಿ ಅನುಷ್ಠಾನಗೊಳಿಸಲು ತಿಳಿಸಲಾಗಿದೆ. ಸದರಿ ಯೋಜನೆಗೆ ಓಳಪಡಲು ರೈತರು ಕೇವಲ ಒಂದು ಪುಟದಲ್ಲಿರುವ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕಾಗಿರುತ್ತದೆ ಎಂದು ತಿಳಿಸಿದರು.