ಬೆಳಗಾವಿ: ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗೊರಗುದ್ದಿ ಗ್ರಾಮದಲ್ಲಿ ಶ್ರೀ ಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವಕ್ಕೆ ಶ್ರೀ ಸಂತೋಷ್ ಜಾರಕಿಹೊಳಿ ಅವರನ್ನ ಉದ್ಘಾಟನೆ ಸಮಾರಂಭಕ್ಕೆ ಚಾಲನೆ ನೀಡಲು ಆಹ್ವಾನದ ಮೇರೆಗೆ ಆಗಮಿಸಿದ್ದರು.
ಹೌದು ಸಂತೋಷ್ ಜಾರಕಿಹೊಳಿ ಅವರು ಇತ್ತೀಚಿಗೆ ಸುಮಾರು ಸಭೆ ಸಮಾರಂಭ ,ಕ್ರಿಕೆಟ್ ಪಂದ್ಯಾವಳಿಗೆ,ಚಾಲನೆ, ಮಠ ಮಂದಿರ, ಹಾಗೂ ಕಷ್ಟ ಅಂತ ಬಂದವರಿಗೆ ಸಹಾಯ ಹಸ್ತ ಚಾಚುವುದ ರಲ್ಲಿ ಇಟ್ಟಿಚ್ಚಿಗೆ ಎಲ್ಲದಕ್ಕೂ ಸೈ ಎಂದು ಬಂದ ಜನರಿಗೆ ಆಸರೆ ಆಗುತ್ತಿದ್ದಾರೆ.
ಇಂದು ಅದೇ ರೀತಿ ಗೊರಗುದ್ದಿ ಗ್ರಾಮಕ್ಕೆ ಹೋಗಿ ಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು, ಅಷ್ಟೇ ಅಲ್ಲದೆ ಅಲ್ಲಿನ ಯುವಕರ ಹಾಗೂ ಗ್ರಾಮಸ್ಥರು ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು
ಅಷ್ಟೇ ಅಲ್ಲದೆ ಸಂತೋಷ್ ಜಾರಕಿಹೊಳಿ ಅವರನ್ನ ನೋಡಿ ಯುವಕರು ಫುಲ್ ಖುಷಿಯಾಗಿ ಸೆಲ್ಫಿಗಾಗಿ ಕೂಡ ಮುಗಿಬಿದ್ದರು