ಬಳ್ಳಾರಿ: ನಿರ್ಮಾಣ ಹಂತದ ಸೇತುವೆ ಮೇಲೆ ಬೈಕ್ ಸ್ಕಿಡ್ ಆದ ಪರಿಣಾಮ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಆಂಧ್ರದ ಗಡಿಭಾಗ ಚಿಂತಗುಂಟ ಬಳಿ ನಡೆದಿದೆ.
ಗಾದಿಲಿಂಗ, ಕಾಡಸಿದ್ದ ಹಾಗೂ ಸಿರಿಗೇರಿ ಕ್ರಾಸ್‌ನ ಚಂದ್ರಶೇಖರ ಎಂಬುವರು ಅಪಘಾತದಲ್ಲಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ನಿಯಂತ್ರಣ ತಪ್ಪಿ ಬೈಕ್ ಸ್ಕಿಡ್ ಆಗಿದ್ದು ಈ ವೇಳೆ ದೇವರ ಕಾರ್ಯಕ್ಕೆಂದು ಆಂಧ್ರ ಪ್ರದೇಶದಕ್ಕೆ ತೆರಳುತ್ತಿದ್ದ ಮೂವರು ಸೇತುವೆ ಮೇಲಿಂದ ಕೆಳಕ್ಕೆ ಉರುಳಿಬಿದ್ದು ಸಾವನ್ನಪ್ಪಿದ್ದಾರೆ. ಆಂಧ್ರ ಪ್ರದೇಶದ ಹಾಲಹರವಿ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಧವಿರಿಸಿರೋ ಪೊಲೀಸರು ಮೃತದೇಹಗಳನ್ನು ಸೇತುವೆ ನಿರ್ಮಾಣ ಕಾರ್ಯಕ್ಕೆ ತೆಗೆದಿದ್ದ ಅಳ್ಳದಿಂದ ಮೇಲಕ್ಕೆತ್ತಿ ಮರಣೋತ್ತಯ ಪರೀಕ್ಷೆಗೆ ರವಾನೆ ಮಾಡಿದ್ದಾರೆ.