ಬೆಂಗಳೂರು: ಸ್ವಾಮೀಜಿಗಳ ಬಳಿಯೇ ಲಂಚ ಕೇಳುತ್ತಾರೆಂದರೆ ಎಂಥಹ ನಾಚಿಕೆಗೇಡಿನ ಸರ್ಕಾರವಿದು? ಇದು 40% ಸರ್ಕಾರ ಎನ್ನುವುದು ಸಾಬೀತಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮಠಗಳಿಗೆ ಕೊಟ್ಟ ಅನುದಾನ ಪಡೆಯುವುದಕ್ಕೂ ಕಮಿಷನ್ ಕೊಡಬೇಕು ಎಂದು ಸ್ವಾಮೀಜಿಗಳು ಮಾಡಿರುವ ಆರೋಪ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ಸ್ವಾಮೀಜಿಗಳ ಬಳಿ ಕಮಿಷನ್ ಕೇಳೋದು ನಾಚಿಕೆಗೇಡಿನತನ.
ಸಿಎಂ ಮನೆ ಮುತ್ತಿಗೆ ಹಾಕಿದ್ದಕ್ಕೆ ಕಾಂಗ್ರೆಸ್ ನಾಯಕರ ಮೇಲೆ ಎಫ್‌ಐಆರ್ ಹಾಕಿದ್ದಾರೆ. ನಾನು ಎ1 ಆದರೂ ಆಗಲಿ, ಎ2 ಆದರೂ ಆಗಲಿ, ನಾವು ಎದುರಿಸುತ್ತೇವೆ ಎಂದು ಹೇಳಿದರು.