ಕಣ್ಣಲ್ಲಿ ಖಾರದಪುಡಿ ಎರಚಿ ಹಣ ದರೋಡೆ ನಾಟಕವಾಡಿ ಪೆÇಲೀಸರ ದಿಕ್ಕು ತಪ್ಪಿಸಿದ್ದ ಲಾರಿ ಚಾಲಕನನ್ನು 36 ಗಂಟೆಯಲ್ಲೆ ಚಿಕ್ಕೋಡಿ ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ.
ಹೌದು ಡೈರಿಗಳಿಗೆ ಹತ್ತಿಕಾಳು ಹಿಂಡಿ ಸ್ಟಾಕ್ ಸರಬರಾಜು ಮಾಡಿ ಬಂದಿದ್ದ ಹಣವನ್ನು ಚಿಕ್ಕೋಡಿ ತಾಲೂಕಿನ ಬೆಳಕುಡ ಕ್ರಾಸ್ ಬಳಿ ಕಣ್ಣಲ್ಲಿ ಖಾರದ ಪುಡಿ ಎರಚಿ ಯಾರೋ ದರೋಡೆ ಮಾಡಿದ್ದಾರೆಂದು ಚಾಲಕ ಆನಂದ ಎಂಬಾತ ಚಿಕ್ಕೋಡಿ ಪೆÇಲೀಸ್ ಠಾಣೆಗೆ ಬಂದು ಶುಕ್ರವಾರ ಮಧ್ಯಾಹ್ನ ದೂರು ನೀಡಿದ್ದ. ಈ ರೀತಿ ಪೊಲೀಸರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದ. ಆದರೆ ಪೊಲೀಸರು ಚಾಲಕ ಆನಂದನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಾನೆ ಹಣ ದರೋಡೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ತನ್ನ ವಯಕ್ತಿಕ ಸಾಲಕ್ಕಾಗಿ ದರೋಡೆಯ ನಾಟಕ ಮಾಡಿದ್ದು, 8 ಲಕ್ಷ 52 ಸಾವಿರ ರೂಪಾಯಿ ದರೋಡೆಯಾಗಿದೆ ಎಂದು ಮನೆಯಲ್ಲಿ ಮುಚ್ಚಿಟ್ಟಿದ್ದ ಎಂದು ಪೆÇಲೀಸರು ತಿಳಿಸಿದ್ದಾರೆ. 36 ಗಂಟೆಯಲ್ಲೇ ಚಿಕ್ಕೋಡಿ ಪೆÇಲೀಸರು ಪ್ರಕರಣ ಬೇಧಿಸಿದ್ದು, ಲಾರಿ ಚಾಲಕ ಆನಂದ ಮಲ್ಲಾಡಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಚಿಕ್ಕೋಡಿ, ಕಾಗವಾಡ ತಾಲೂಕಿನ ವಿವಿಧ ಗ್ರಾಮಗಳ ಹಾಲಿನ ಡೈರಿಗಳಿಗೆ ಆನಂದ್ ಹತ್ತಿಕಾಳು ಹಿಂಡಿ ಸರಬರಾಜು ಮಾಡುತ್ತಿದ್ದ. ಚಿಕ್ಕೋಡಿ ಪೆÇಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.