ಯಶ್ (Yash) ಅಭಿನಯದ ‘ಕೆಜಿಎಫ್ ಚಾಪ್ಟರ್ 2’ (KGF Chapter 2) ಬಾಕ್ಸಾಫೀಸ್ ಧೂಳೀಪಟ ಮಾಡುತ್ತಿದೆ. ಚಿತ್ರಕ್ಕೆ ಎಲ್ಲೆಡೆಯಿಂದ ಧನಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬಾಯಿ ಮಾತಿನ ಪ್ರಚಾರ ಮತ್ತಷ್ಟು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುತ್ತಿದೆ. ಇದರ ಪರಿಣಾಮ ಈಗಾಗಲೇ ಭಾನುವಾರದವರೆಗಿನ ಶೋಗಳು ಬಹುತೇಕ್ ಬುಕ್ ಆಗಿವೆ. ಕನ್ನಡ ಚಿತ್ರಗಳಿಗೆ ಹೆಚ್ಚಾಗಿ ವೀಕ್ಷಕರಿರದ ತಮಿಳುನಾಡಿನಲ್ಲಿ ತೆರೆ ಕಂಡ 2, 3 ಹಾಗೂ 4ನೇ ದಿನವೂ ಮುಂಜಾನೆಯ ಶೋಗಳನ್ನು ಏರ್ಪಡಿಸಲಾಗಿದೆ. ವಿದೇಶಗಳಲ್ಲೂ ಚಿತ್ರದ ಸ್ಕ್ರೀನ್ಗಳ ಸಂಖ್ಯೆ ಹೆಚ್ಚುತ್ತಿದೆ. ಉತ್ತರ ಭಾರತದ ರಾಜ್ಯಗಳಲ್ಲೂ ಚಿತ್ರದ ಶೋಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. ಇದರ ಪರಿಣಾಮ ಬಾಕ್ಸಾಫೀಸ್ನಲ್ಲಿ (KGF Chapter 2 Box Office Collection) ಹಲವು ದಾಖಲೆಗಳನ್ನು ಬರೆಯುತ್ತಿದೆ ‘ಕೆಜಿಎಫ್ ಚಾಪ್ಟರ್ 2’. ಇದೀಗ ಚಿತ್ರತಂಡ ಭಾರತದಲ್ಲಿ ಯಶ್ ನಟನೆಯ ಚಿತ್ರವು ಎರಡು ದಿನಗಳಲ್ಲಿ ಎಷ್ಟು ಕಲೆಕ್ಷನ್ ಮಾಡಿದೆ ಎಂಬುದನ್ನು ಬಹಿರಂಗಗೊಳಿಸಿದೆ. ದೇಶಾದ್ಯಂತ ಎಲ್ಲಾ ಭಾಷೆಗಳಲ್ಲಿ ಸೇರಿಸಿ ‘ಕೆಜಿಎಫ್ 2’ ಚಿತ್ರವು 240 ಕೋಟಿ ರೂ ಬಾಚಿಕೊಂಡಿದೆ.