ಲಖನೌ: ಉತ್ತರ ಪ್ರದೇಶದ ಹಮೀರ್ಪುರ್ನಲ್ಲಿರುವ ಗುಟ್ಕಾ ವ್ಯಾಪಾರಿ ಮನೆಯ ಮೇಲೆ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (ಸಿಜಿಎಸ್ಟಿ) ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಬೆಡ್ ಅಡಿಯಲ್ಲಿ 6 ಕೋಟಿ 31 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ.
ಏಪ್ರಿಲ್ 12ರ ಮಂಗಳವಾರ ಈ ದಾಳಿ ನಡೆದಿದ್ದು, 6.31 ಕೋಟಿ ರೂಪಾಯಿ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಡ್ ಅಡಿಯಲ್ಲಿ ರಾಶಿ ರಾಶಿ ಹಣ ಪತ್ತೆಯಾದ ಬಳಿಕ ಅಧಿಕಾರಿಗಳ ನೋಟು ಎಣಿಸುವ ಯಂತ್ರಗಳನ್ನು ತರಿಸಿದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉದ್ಯೋಗಿಗಳು ಮೂರು ಯಂತ್ರಗಳನ್ನು ತಂದರು. ಸುಮಾರು 18 ಗಂಟೆಗಳ ಕಾಲ ನೋಟು ಎಣಿಸಿ, ಟ್ರಂಕ್ನಲ್ಲಿ ತುಂಬಿದರು. ಈ ಘಟನೆಯ ಬಗ್ಗೆ ದಾಳಿ ನಡೆಸಿದ ಅಧಿಕಾರಿಗಳ ತಂಡದ ಜತೆಗಿದ್ದ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಲು ನಿರಾಕರಿಸಿದರು. ಜಂಟಿ ಆಯುಕ್ತರು ಸರ್ಚ್ ವಾರೆಂಟ್ ಹೊರಡಿಸಿದ್ದು, ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಒಟ್ಟು 15 ಸದಸ್ಯರ ತಂಡವು ಸುಮೇರ್‌ಪುರ ನಗರದ ಪೊಲೀಸ್ ಠಾಣೆ ಬಳಿಯ ಗುಟ್ಕಾ ವ್ಯಾಪಾರಿ ಜಗತ್ ಗುಪ್ತಾ ಅವರ ಮನೆಯ ಮೇಲೆ ದಾಳಿ ನಡೆಸಿತು. ಏಪ್ರಿಲ್ 12 ರಂದು ಬೆಳಗ್ಗೆ 6 ಗಂಟೆಗೆ ಪ್ರಾರಂಭವಾದ ಶೋಧ ಕಾರ್ಯಾಚರಣೆ ಏಪ್ರಿಲ್ 13ರ ಸಂಜೆಯವರೆಗೆ ಮುಂದುವರೆಯಿತು. ರಾತ್ರಿಯ ವೇಳೆಗೆ, ಬ್ಯಾಂಕ್ ಉದ್ಯೋಗಿಗಳು ಹಣವನ್ನು ಇರಿಸಿಕೊಳ್ಳಲು ಒಂದ ದೊಡ್ಡ ಟ್ರಂಕ್‌ಗಳೊಂದಿಗೆ ಗುಪ್ತಾ ಮನೆಯನ್ನು ತಲುಪಿದರು.
ದಾಳಿ ವೇಳೆ ವಶಕ್ಕೆ ಪಡೆದ ಹಣವನ್ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹಮೀರ್‌ಪುರ ಶಾಖೆಗೆ ಕಳುಹಿಸಲಾಗಿದೆ