ಬೆಂಗಳೂರು: ಯಾವುದೇ ರಂಗದಲ್ಲಿದ್ದರು, ಎಷ್ಟೇ ದೊಡ್ಡವರ ಮಕ್ಕಳಾಗಿದ್ದರು, ಎಷ್ಟೇ ಪ್ರಭಾವಿಗಳಾಗಿದ್ದರು ಸಹಿತ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದರೆ, ಅಂತಹವರಿಗೆ ಶಿಕ್ಷೆ ವಿಧಿಸುತ್ತೇವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಚಿವ ಸಂಪುಟ ಸಭೆ ಬಳಿಕ ಡ್ರಗ್ಸ್ ದಂಧೆ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ವಿರುದ್ಧ ಕಳೆದ ಆರು ತಿಂಗಳಿಂದ ನಿರಂತರವಾಗಿ ಕಾರ್ಯಾಚರಣೆ ನಡೆಯುತ್ತಿದೆ. ಆರೋಪಿಗಳಿಗೆ ನೋಟಿಸ್ ಕೊಟ್ಟು ಕರೆಸಿ ವಿಚಾರಣೆ ಮಾಡ್ತಿದ್ದೇವೆ. ಸುಮ್ ಸುಮ್ಮನೆ ಹೆಸರುಗಳನ್ನು ಹೇಳೋದು ತಪ್ಪಾಗುತ್ತೆ. ಸಾಕ್ಷ್ಯಾಧಾರಗಳ ಹೆಸರು ಬಳಸೋದು ತಪ್ಪಾಗುತ್ತದೆ. ಕಾಲ ತಕ್ಕಂತೆ ಅವರಿಗೆ ನೋಟಿಸ್ ನೀಡೋದು, ಅವರ ಹೆಸರನ್ನು ಬಹಿರಂಗ ಪಡಿಸುವ ಕೆಲಸ ಮಾಡ್ತಾರೆ. ಒಂದು ವ್ಯವಸ್ಥಿತವಾದ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.