ಬೆಂಗಳೂರು: ತುಮಕೂರಿನಿಂದ ಬೆಂಗಳೂರಿಗೆ ಬಂದು ಸಾಲು ಸಾಲು ದ್ವಿಚಕ್ರ ವಾಹನಗಳನ್ನ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ತುಮಕೂರಿನ ಗುಬ್ಬಿ ನಿವಾಸಿ ಶ್ರೀನಿವಾಸ್ ಬಂಧಿತ ಆರೋಪಿ. ಕಳೆದ ಕೆಲ ವರ್ಷಗಳ ಹಿಂದೆ ಶ್ರೀನಿವಾಸನನ್ನ ತೊರೆದು ಪತ್ನಿ ದೂರಾಗಿದ್ದಳು. ಖರ್ಚಿಗೆ ಹಣವಿಲ್ಲದೆ ಕಳ್ಳತನಕ್ಕಾಗಿ ತುಮಕೂರಿನಿಂದ ಬಸ್ ಹತ್ತಿ ಬೆಂಗಳೂರಿಗೆ ಬರುತ್ತಿದ್ದ ಆರೋಪಿ, ನೇರವಾಗಿ ಕಾಮಾಕ್ಷಿಪಾಳ್ಯಕ್ಕೆ ತೆರಳುತ್ತಿದ್ದ.

ಗೇರ್ ವಾಹನಗಳನ್ನ ಓಡಿಸಲು ಬಾರದೇ ಇದ್ದಿದ್ರಿಂದ ಮೊಪೆಡ್, ಸ್ಕೂಟರ್ ಗಳನ್ನೇ ಕದಿಯುತ್ತಿದ್ದ. ಕದ್ದ ವಾಹನದಲ್ಲೇ ಊರಿಗೆ ತೆರಳಿ, ಗೆಳೆಯರು ಸಂಬಂಧಿಕರಿಗೆ ಮಾರುತ್ತಿದ್ದ. ಸಿಸಿಟಿವಿ ದೃಶ್ಯಾವಳಿಗಳನ್ನ ಆಧರಿಸಿ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ಇದೀಗ ಆರೋಪಿಯನ್ನ ಬಂಧಿಸಿದ್ದು, ಆತನಿಂದ 10 ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆದಿದ್ದಾರೆ.
Laxmi News 24×7