Breaking News

ಬಿಜೆಪಿಯಲ್ಲಿ ಮುಖ್ಯಮಂತ್ರಿಯೂ ಟಿಕೆಟ್ ಕಳೆದುಕೊಳ್ಳುವ ಅಪಾಯ: ಸಿದ್ದರಾಮಯ್ಯ ವ್ಯಂಗ್ಯ

Spread the love

ಬೆಂಗಳೂರು: ಕಾರ್ಯನಿರ್ವಹಣೆ, ಸುಧಾರಣೆ, ಬದಲಾವಣೆಗಳ ಮಾನದಂಡದ ಆಧಾರದಲ್ಲಿ ಹಾಲಿ ಸಚಿವರ ಟಿಕೆಟ್‌ ಅನ್ನು ಬಿಜೆಪಿ ತೀರ್ಮಾನಿಸಲಿದೆಯಂತೆ. ಈ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಸಚಿವರ ಜೊತೆಯಲ್ಲಿ ಮುಖ್ಯಮಂತ್ರಿಗಳೂ ಟಿಕೆಟ್ ಕಳೆದುಕೊಳ್ಳುವ ಅಪಾಯ ಇದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಈ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಸಚಿವರ ಜೊತೆಯಲ್ಲಿ ಮುಖ್ಯಮಂತ್ರಿಗಳೂ ಟಿಕೆಟ್ ಕಳೆದುಕೊಳ್ಳುವ ಅಪಾಯ ಇದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ

ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಬಿಜೆಪಿ ಹೈಕಮಾಂಡ್ ನಿಗದಿಪಡಿಸಿರುವ ಮಾನದಂಡಗಳನ್ನು ಗಮನಿಸಿದರೆ ಬಿಜೆಪಿಗೆ ಅಭ್ಯರ್ಥಿಗಳ ತತ್ವಾರ ಉಂಟಾಗುವ ಗಂಭೀರ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಬಿಜೆಪಿಗೆ ನುಡಿದಂತೆ ನಡೆದು ಅಭ್ಯಾಸವಿರಬೇಕಲ್ಲ?’ ಎಂದು ಹೇಳಿದ್ದಾರೆ.

‘ಟಿಕೆಟ್ ಪಡೆದುಕೊಳ್ಳಲು ಬಿಜೆಪಿ ಹೈಕಮಾಂಡ್ ನಿಗದಿಪಡಿಸಲು ಯೋಚಿಸುತ್ತಿರುವ ಮಾನದಂಡಗಳಾದ ಕಾರ್ಯವೈಖರಿ, ಜನರ ಸಮಸ್ಯೆಗೆ ಸ್ಪಂದಿಸುವ ಗುಣ ಮತ್ತು ಜನಪ್ರಿಯತೆಯ ಪರೀಕ್ಷೆಯಲ್ಲಿ ರಾಜ್ಯ ಬಿಜೆಪಿಗೆ ಸೇರಿದ ಯಾವೊಬ್ಬ ಹಾಲಿ ಶಾಸಕನಾದರೂ ಪಾಸಾಗಲು ಸಾಧ್ಯವೇ?’ ಎಂದು ಅವರು ಪ್ರಶ್ನಿಸಿದ್ದಾರೆ.

‘ಕಾರ್ಯನಿರ್ವಹಣೆ, ಸುಧಾರಣೆ, ಬದಲಾವಣೆಗಳ ಮಾನದಂಡದ ಮೂಲಕ ಬಿಜೆಪಿ ಸಚಿವರ ಟಿಕೆಟ್ ಪಡೆಯುವ ಅರ್ಹತೆಯನ್ನು ತೀರ್ಮಾನಿಸಲಾಗುತ್ತದೆಯಂತೆ. ಈ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಿದರೆ ಸಚಿವರ ಜೊತೆಯಲ್ಲಿ ಮುಖ್ಯಮಂತ್ರಿಗಳೂ ಟಿಕೆಟ್ ಕಳೆದುಕೊಳ್ಳುವ ಅಪಾಯ ಇದೆ’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.


Spread the love

About Laxminews 24x7

Check Also

ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ

Spread the love ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕೊಳವಿ ಗ್ರಾಮದ ನಮ್ಮೂರ ಸರಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ