ಕೆಪಿಸಿಸಿ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂರ್ಯಗ್ರಹಣ ನೋಡುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎರಡುವರೆ ಲಕ್ಷ ರೂಪಾಯಿ ಖರ್ಚು ಮಾಡಿ ಜಪಾನ್‍ನಿಂದ ಕನ್ನಡಕವೊಂದನ್ನು ತರಿಸಿಕೊಂಡಿದ್ದರು.
ದುರಾದೃಷ್ಟವಶಾತ್ ಮೋಡ ಕವಿದಿದ್ದರಿಂದ ಸೂರ್ಯಗ್ರಹಣ ನೋಡಲಾಗಲಿಲ್ಲ, ಕನ್ನಡಕ ಬಳಕೆಯಾಗಲಿಲ್ಲ. ಈಗ ದೇಶಾದ್ಯಂತ ವಿದ್ಯಾವಂತರು, ಕೂಲಿ ಕಾರ್ಮಿಕರು, ರೈತರು, ಕಾರ್ಮಿಕರು, ಯುವಕರು ಕೆಲಸ ಇಲ್ಲದೆ ಸಂಕಷ್ಟದಲ್ಲಿದ್ದಾರೆ.
ಅದು ಮೋದಿ ಅವರಿಗೆ ಕಾಣುತ್ತಿಲ್ಲ. ಯಾವ ಕನ್ನಡಕ ಹಾಕಿದರೆ ನಿರುದ್ಯೋಗಿಗಳ ಕಷ್ಟ ಮೋದಿ ಅವರಿಗೆ ಕಾಣುತ್ತದೆ ಎಂದು ಹೇಳಿದರೆ ಆ ಕನ್ನಡಕವನ್ನು ಎಲ್ಲೇ ಇದ್ದರೂ ತರಿಸಿಕೊಡುತ್ತೇವೆ. ಅದರಿಂದಲಾದರೂ ನಿರುದ್ಯೋಗಿಗಳ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದರು.
Laxmi News 24×7