ಮುದ್ದೇಬಿಹಾಳ: ಪಟ್ಟಣದ ಹುಡ್ಕೋದಲ್ಲಿರುವ ಬಾಂಡ್ ರೈಟರ್ ಅಂಗಡಿಗಳಿಗೆ ಶಾರ್ಟ್ ಸರ್ಕೂಟ್ ನಿಂದಾಗಿ ಹತ್ತಿದ ಬೆಂಕಿ ಹೊತ್ತಿದ ಪರಿಣಾಮ ಕಂಪ್ಯೂಟರ್ ಸೇರಿದಂತೆ ಪೀಠೋಪಕರಣಗಳು ಸುಟ್ಟು ಭಸ್ಮವಾದ ಘಟನೆ ಶುಕ್ರವಾರ ಸಂಭವಿಸಿದೆ.
ಕನ್ನೂರ, ಸಂಕಿನ್, ಹಿರೇಮಠ, ಪೊಲೇಶಿ ಅವರಿಗೆ ಸೇರಿದ್ದ ಮಳಿಗೆಗಳು ಬೆಂಕಿಗೆ ಅಹುತಿಯಾಗಿದ್ದು ಸಮಯಕ್ಕೆ ಸರಿಯಾಗಿ ಅಗ್ನಿಶಾಮಕದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ.

ಈ ನಾಲ್ಕು ಮಳಿಗೆಗಳ ಪಕ್ಕದಲ್ಲಿಯೇ ಇರುವ ಬೃಹತ್ ಕಟ್ಟಡ ಪಲ್ಲವಿ ಕಾಂಪ್ಲೆಕ್ಸ್ ಗೂ ಈ ಬೆಂಕಿ ತಗುಲುವ ಸಾಧ್ಯತೆ ಇತ್ತು, ಗಾಳಿ ವಿರುದ್ಧ ದಿಕ್ಕಿನಲ್ಲಿ ಇದ್ದಿದ್ದರಿಂದ ಈ ಅಪಾಯ ತಪ್ಪಿದೆ. ಒಂದು ವೇಳೆ ಬೆಂಕಿ ತಗುಲಿದ್ದರೆ ದೊಡ್ಡ ಪ್ರಮಾಣದ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ಘಟನಾ ಸ್ಥಳದಲ್ಲಿ ಸೇರಿದ್ದ ಸಾರ್ವಜನಿಕರು ತಿಳಿಸಿದ್ದಾರೆ.
Laxmi News 24×7