Breaking News

ಹೋಮ್ ಮಿನಿಸ್ಟರ್‌ಗೆ ಹೇಳ್ತೀಯಾ ಹೇಳ್ಕೋ ಹೋಗು. ಆಡಿಯೋ ವೈರಲ್​ ಆಗ್ತಿದ್ದಂತೆ PSI ಎತ್ತಂಗಡಿ

Spread the love

ಶಿವಮೊಗ್ಗ: ಹೋಮ್ ಮಿನಿಸ್ಟರ್‌ಗೆ ಹೇಳ್ತೀಯಾ ಹೇಳ್ಕೋ ಹೋಗು ಎಂದು ಲಾರಿ ಮಾಲೀಕರಿಗೆ ಬೆದರಿಕೆ ಹಾಕಿದ್ದರು ಎನ್ನಲಾದ ತೀರ್ಥಹಳ್ಳಿ ತಾಲೂಕು ಮಾಳೂರು ಠಾಣೆ ಪಿಎಸ್‌ಐ ಜಯಪ್ಪ ನಾಯ್ಕ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ಜಯಪ್ಪ ನಾಯ್ಕ್ ವಿರುದ್ಧ ಇತ್ತೀಚಿಗೆ ಸಾಕಷ್ಟು ಆರೋಪಗಳು ಕೇಳಿಬಂದಿದ್ದವು.

ತೀರ್ಥಹಳ್ಳಿ ತಾಲೂಕಲ್ಲಿ ಮರಳು ದಂಧೆ ಅತಿಹೆಚ್ಚಾಗಿ ನಡೆಯುತ್ತಿದ್ದು, ಕೆಲ ಲಾರಿ ಮಾಲೀಕರು ಮತ್ತು ಚಾಲಕರು ಮಾಳೂರು ಪಿಎಸ್‌ಐ ವಿರುದ್ಧ ಎಸ್ಪಿಗೆ ದೂರು ನೀಡಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ಪಿಎಸ್‌ಐ ಜಯಪ್ಪ ನಾಯ್ಕ, ಹೋಮ್ ಮಿನಿಸ್ಟರ್‌ಗೆ ಬೇಕಾದ್ರೆ ಹೇಳ್ಕೋ ಹೋಗ್ರಿ ಎಂದಿದ್ದರು ಎನ್ನಲಾಗಿದೆ. ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಪಿಎಸ್‌ಐ ಆಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗುತ್ತಿದ್ದಂತೆ ಅವರನ್ನು ಮಾಳೂರು ಠಾಣೆಯಿಂದ ಎತ್ತಂಗಡಿ ಮಾಡಲಾಗಿದೆ. ದಾವಣಗೆರೆಯ ಐಜಿ ಕಚೇರಿಗೆ ಜಯಪ್ಪ ನಾಯ್ಕ್ ಅವರನ್ನ ವರ್ಗಾವಣೆ ಮಾಡಿ, ತೆರವಾದ ಜಾಗಕ್ಕೆ ಕುಂಸಿ ಠಾಣೆಯ ನವೀನ್ ಮಠಪತಿ ಅವರನ್ನು ನಿಯೋಜಿಸಲಾಗಿದೆ.

7 ಸಿಬ್ಬಂದಿ ಅಮಾನತು: ಲಾರಿಗಳನ್ನು ಅಡ್ಡಗಟ್ಟಿ ಹಣ ಪಡೆದ ಆರೋಪದ ಮೇಲೆ ಗಸ್ತು ವಾಹನದ ಏಳು ಸಿಬ್ಬಂದಿಯನ್ನು ಎಸ್ಪಿ ಬಿ.ಎಂ.ಲಕ್ಷ್ಮಿಪ್ರಸಾದ್ ಅಮಾನತು ಮಾಡಿದ್ದಾರೆ. ಸುರೇಶ್, ಸುದರ್ಶನ್, ನಾಗರಾಜ್, ಲೋಕೇಶ್, ಗಂಗಾಧರ್, ಕುಮಾರ್ ಮತ್ತು ಬಸಲಿಂಗಪ್ಪ ಅಮಾನತುಗೊಂಡವರು. ಶಿವಮೊಗ್ಗ ನಗರ ಹೊರಭಾಗದಲ್ಲಿ ಮರಳು ಸಾಗಣೆ ವಾಹನಗಳು ಸೇರಿದಂತೆ ಇನ್ನಿತರೆ ಸರಕು ಸಾಗಣೆ ವಾಹನಗಳನ್ನು ತಡೆದು ದಾಖಲೆ ಪರಿಶೀಲನೆ ನೆಪದಲ್ಲಿ ಹಣ ವಸೂಲು ಮಾಡುತ್ತಿದ್ದ ಆರೋಪ ಕೇಳಿಬಂದಿತ್ತು. ಹೀಗಾಗಿ ಏಳೂ ಸಿಬ್ಬಂದಿಗಳನ್ನು ಎಸ್ಪಿ ಅಮಾನತು ಮಾಡಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ: ಗರ್ಭಿಣಿ ಪತ್ನಿಯನ್ನು ಕಾರಿನಲ್ಲೇ ಕೊಂದು ಕಥೆ ಕಟ್ಟಿದ ವಕೀಲ ಪತಿ ಸೇರಿ ಮೂವರ ಬಂಧನ

Spread the loveಚಿಕ್ಕೋಡಿ(ಬೆಳಗಾವಿ): “ಆರು ತಿಂಗಳ ಗರ್ಭಿಣಿ ಪತ್ನಿಯನ್ನು ಹತ್ಯೆಗೈದ ಘಟನೆ ಚಿಕ್ಕೋಡಿಯ ಉಗಾರ್ ಬಿಕೆ ಗ್ರಾಮದಲ್ಲಿ ಕಳೆದ ಭಾನುವಾರ ರಾತ್ರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ