ಹುಬ್ಬಳ್ಳಿ.ಮನುಷ್ಯ ತನಗೆ ಏನಾದರೂ ಆದರೆ ಅದನ್ನು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದ್ದನ್ನು ಎಲ್ಲರೂ ಗಮನಿಸಿದ್ದೇವೆ. ಆದರೆ ಪ್ರಾಣಿಗೆ ಮನುಷ್ಯನಿಗೆ ನೋವಾದಾಗ ಅದು ಪ್ರತಿಭಟನೆ ಮಾಡಿದನ್ನು ನಾವು ಕಾಣಸಿಗುವುದು ಅಪರೂಪ. ಅದರಂತೆ ಹುಬ್ಬಳ್ಳಿಯಲ್ಲಿ ಇಂತಹ ಅಪರೂಪದ ದೃಶ್ಯ ಕಂಡುಬಂದಿತು.
ಹೌದು. ಬಿಆರ್ ಟಿಎಸ್ ಬಸ್ ಪ್ರಾರಂಭ ಆಗಿನಿಂದ ಒಂದಲ್ಲಾ ಸಮಸ್ಯೆ ಉದ್ಭವಿಸುತ್ತಿದೆ ಅದರಂತೆ ಇಂದು ಕೂಡ ಚಾಲನ ಅಜಾಗರೂಕತೆಯಿಂದ ಬಿ.ಆರ್.ಟಿಎಸ್ ಬಸ್ ರಸ್ತೆಯಲ್ಲಿ ಹೋಗುತ್ತಿರುವ ಎಮ್ಮೆಗೆ ಗುದ್ದಿದ ಪರಿಣಾಮ ಎಮ್ಮೆಯ ಕೊಂಬು ಮುರಿದಿರುವ ಘಟನೆ ನಗರ್ ಲ್ಯಾಮಿಂಗ್ಟನ್ ರಸ್ತೆ ಬಳಿ ನಡೆದಿದೆ.
ಎಂದಿನಂತೆ ಎಮ್ಮೆಗಳು ಹೋಗುತ್ತಿರುವಾಗ, ಬಿ ಆರ್ ಟಿಎಸ್ ಬಸ್ ಎಮ್ಮೆಗೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಎಮ್ಮೆಯ ಒಂದು ಕೊಂಬು ಕಿತ್ತು ಬಂದು ರಕ್ತ ಸುರಿಯಲಾರಂಭಿಸಿದೆ. ಇದನ್ನು ಕಂಡ ಪಕ್ಕದ ಎಮ್ಮೆಗಳು ಬಸ್ ಸುತ್ತುವರೆದು ಬಸ್ ಗೆ ಪ್ರತಿರೋಧ ತೋರಿ ದ ಘಟನೆ ಪ್ರಾಣಿಗಳ ಒಗಟ್ಟಿಗೆ ಹಿಡಿದ ಕನ್ನಡಿಯಂತಿತ್ತು.ಇನ್ನೂ ಕೊಂಬು ಮುರಿದಿದ್ದರಿಂದ ಎಮ್ಮೆಗೆ ಗಂಭೀರವಾಗಿ ಗಾಯಗ ಳಾಗಿದ್ದು, ಎಮ್ಮೆಯ ಮಾಲೀಕ ಬಸ್ ಚಾಲಕನೊಂದಿಗೆ ವಾಗ್ವಾದಕ್ಕೆ ಇಳಿದ ಪರಿಣಾಮ ಕೆಲ ಕಾಲ ರಸ್ತೆ ಸಂಚಾರ ಅಸ್ವಸ್ಥತ ವಾಗಿತ್ತು. ಕೂಡಲೇ ಸ್ಥಳಕ್ಕೆ ಬಂದ ಸಂಚಾರಿ ಠಾಣೆ ಪೊಲೀಸರು ಹಾಗೂ ಉಪನಗರ ಠಾಣೆ ಪೊಲೀಸರು ವಾತಾವರಣವನ್ನು ತಿಳಿಗೊಳಿಸಿ ಬಸ್ಸು ಹಾಗೂ ಎಮ್ಮೆಗಳನ್ನು ಸ್ಥಳದಿಂದ ತೆರವುಗೊಳಿಸಿದರು.
Laxmi News 24×7