Breaking News

ಪಡಿತರ ಚೀಟಿದಾರರಿಗೆ ಬಿಗ್ ಶಾಕ್ : ಏಪ್ರಿಲ್ ನಿಂದ ಗೋಧಿ, 5 ಕೆಜಿ ಅಕ್ಕಿ ಕಟ್

Spread the love

ಬೆಂಗಳೂರು: ಪಡಿತರ ಚೀಟಿದಾರರಿಗೆ ಸರ್ಕಾರ ಶಾಕ್ ನೀಡಿದೆ. ಪಡಿತರ ಚೀಟಿದಾರರಿಗೆ ವಿತರಿಸುವ ರಾಗಿ, ಜೋಳ ಖರೀದಿ ಪ್ರಕ್ರಿಯೆ ನಿಗದಿತ ಪ್ರಮಾಣದಲ್ಲಿ ನಡೆದಿಲ್ಲ. ಈ ಕಾರಣದಿಂದ ಏಪ್ರಿಲ್‌ 1ರಿಂದ ಪಡಿತರ ಗೋಧಿಯನ್ನು ಕೈಬಿಡಲಾಗಿದ್ದು, ಕೇವಲ ಅಕ್ಕಿ ಮತ್ತು ಹೆಚ್ಚುವರಿಯಾಗಿ 1 ಕೆ.ಜಿ ರಾಗಿ ಅಥವಾ ಜೋಳ ವಿತರಿಸಲಿದೆ.

 

ಈವರೆಗೆ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ್‌ ಯೋಜನೆ (ಪಿಎಂಜಿಕೆಎವೈ)ಯಡಿ ಪ್ರತಿ ವ್ಯಕ್ತಿಗೆ 5 ಕೆ.ಜಿ ನೀಡಲಾಗ್ತಿತ್ತು. ಕೋವಿಡ್ ಬಾಬ್ತು ಮುಗಿದಿರುವ ಹಿನ್ನೆಲೆ ಈ ಅಕ್ಕಿಯೂ ಮುಂದಿನ ತಿಂಗಳಿಂದ ಸಿಗುವುದಿಲ್ಲ. ಈವರೆಗೆ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿದಾರರಿಗೆ ಪ್ರತಿ ಕಾರ್ಡ್‌ಗೆ 2 ಕೆ.ಜಿ ಗೋಧಿ ಮತ್ತು ಪ್ರತಿ ಸದಸ್ಯರಿಗೆ ತಲಾ 5 ಕೆ.ಜಿ ಅಕ್ಕಿ ವಿತರಿಸಲಾಗುತ್ತಿತ್ತು.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ