ಇದೇ ವರ್ಷ ₹200 ಕೋಟಿ ವೆಚ್ಚದಲ್ಲಿ 100 ಪೊಲೀಸ್ ಠಾಣೆ ನಿರ್ಮಾಣ

Spread the love

ಬೆಂಗಳೂರು : ಕೆಲ ನಿರ್ಬಂಧ ಎದುರಾಗುವ ಹಿನ್ನೆಲೆ ಪೊಲೀಸ್ ಕೆಲಸದಲ್ಲಿ ನಿರತರಾಗಿರುವ ನಿವೃತ್ತ ಸೈನಿಕರಿಗೆ 7 ವರ್ಷಕ್ಕೆ ಮುನ್ನ ವರ್ಗಾವಣೆ ನೀಡುವುದು ಕಷ್ಟವಾಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಸೇನೆಯಲ್ಲಿ ಸೇವೆ ಸಲ್ಲಿಸಿ ಪೊಲೀಸ್ ಇಲಾಖೆಯಲ್ಲಿ ಮರು ನೇಮಕಾತಿಗೊಂಡಿರುವ ನಿವೃತ್ತ ಸೇನಾಧಿಕಾರಿಗಳ ಸಮಸ್ಯೆ ಕುರಿತು ನಡೆದ ಚರ್ಚೆಗೆ ಉತ್ತರಿಸಿದ ಸಂದರ್ಭ, ಪೊಲೀಸ್ ಕೆಲಸಕ್ಕೆ ನೇಮಿಸುವಾಗ ವಲಯ, ಪ್ರದೇಶವಾರು ನೋಟಿಫಿಕೇಷನ್ ನೀಡುತ್ತೇವೆ. ಶೇ.10ರಷ್ಟು ವಿಶೇಷ ಅವಕಾಶ ಇದೆ ಎಂದರು.

ನೇಮಕಾತಿ ವಯೋಮಾನ 40 ವರ್ಷ ಮಾಡಲಾಗಿದೆ. ಹಿಂದೆ ಈ ವ್ಯವಸ್ಥೆ ಇರಲಿಲ್ಲ. ಈಗ ಪರಿಶೀಲಿಸಿ 7 ವರ್ಷಕ್ಕೆ ಇಳಿಸಲಾಗಿದೆ. ಅವರಿಗೆ ಸೇವೆ ಸಲ್ಲಿಸುವ ವಯೋಮಾನದ ಅವಕಾಶ ಕಡಿಮೆ ಇರುತ್ತದೆ. 2 ವರ್ಷ ಕಾಲಮಿತಿ ಪತಿ-ಪತ್ನಿ ಒಟ್ಟಾಗಿ ಇರಲು ಅವಕಾಶ ಕಲ್ಪಿಸಲಾಗಿದೆ. ಇವರಿಗೆ ನೀಡುವ ಸವಲತ್ತನ್ನು ಉಳಿದವರೂ ಕೇಳುತ್ತಾರೆ. ಹೀಗಾಗಿ, ವಿಶೇಷ ಸವಲತ್ತು ಕಲ್ಪಿಸಲು ಸಾಧ್ಯವಿಲ್ಲ.

ಮಂಗಳೂರು ಭಾಗದಲ್ಲಿ ತುಳು-ಬ್ಯಾರಿ ಭಾಷೆ ಮಾತನಾಡುವವರು ಜಾಸ್ತಿ. ಇಲ್ಲಿ ಪೊಲೀಸ್ ಕೆಲಸಕ್ಕೆ ಅರ್ಜಿ ಹಾಕುವವರು ಕಡಿಮೆ. ಉತ್ತರ ಕರ್ನಾಟಕ ಭಾಗದವರು ಹೆಚ್ಚಾಗಿ ಬರುತ್ತಾರೆ. ತವರಿಗೆ ವರ್ಗಾವಣೆ ತಕ್ಷಣ ನೀಡಿದರೆ ಕೆಲ ಭಾಗದಲ್ಲಿ ಸಿಬ್ಬಂದಿ ಕೊರತೆ ಎದುರಾಗಲಿದೆ ಎಂದರು. ಅಪಾಯ ಭತ್ಯೆ ನೀಡಿಕೆ ಪೊಲೀಸರು ಕಾರ್ಯ ನಿರ್ವಹಿಸುವ ತಾಣ ಆಧರಿಸಿ ನೀಡುತ್ತೇವೆ.

20 ಸಾವಿರ ಎರಡು ಹಾಸಿಗೆ ಮನೆಗಳನ್ನು ನಿರ್ಮಿಸಿದ್ದೇವೆ. 200 ಕೋಟಿ ರೂ. ವೆಚ್ಚದಲ್ಲಿ 100 ಹೊಸ ಪೊಲೀಸ್ ಠಾಣೆ ನಿರ್ಮಿಸುತ್ತಿದ್ದೇವೆ. ಇದಾದ ಬಳಿಕ ಕೇವಲ 3-4 ಠಾಣೆಗಳು ಮಾತ್ರ ಶೆಡ್, ಬಾಡಿಗೆ ಕಟ್ಟಡದಲ್ಲಿ ಇರಲಿವೆ. ಇದುವರೆಗೂ ಪ್ರತಿ ವರ್ಷ 4-5 ಠಾಣೆಗಳು ಮಾತ್ರ ನಿರ್ಮಾಣಗೊಳ್ಳುತ್ತಿದ್ದವು ಎಂದು ವಿವರಿಸಿದರು.


Spread the love

About Laxminews 24x7

Check Also

Bigg Boss ಸೀಸನ್​-11ಕ್ಕೆ ಎಂಟ್ರಿ ಪಡೆದ ನಾಲ್ವರು ಸ್ಫರ್ಧಿಗಳು

Spread the love ಬೆಂಗಳೂರು: ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್​ಬಾಸ್ (Bigg Boss)​ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿಯೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ