Breaking News

ಗೋಮಾಂಸ ಸಾಗಿಸುತ್ತಿದ್ದಾನೆಂದು ಶಂಕಿಸಿ ಹಿಗ್ಗಾಮುಗ್ಗಾ ಥಳಿಸಿದ್ರು

Spread the love

ಲಕ್ನೋ: ದನದ ಮಾಂಸ ಸಾಗಿಸುತ್ತಿದ್ದಾನೆ ಎನ್ನುವ ಶಂಕೆಯಿಂದ ವಾಹನ ಚಾಲಕನಿಗೆ ಉತ್ತರ ಪ್ರದೇಶದ ಮಥುರಾ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಮೊಹಮ್ಮದ್ ಅಮೀರ್ (35) ಥಳಿತಕ್ಕೊಳಗಾದವರಾಗಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಮಥುರಾದ ರಾಲ್ ಗ್ರಾಮದಲ್ಲಿ ನಡೆದಿದೆ. ಪಿಕ್-ಅಪ್ ವ್ಯಾನ್‌ನಲ್ಲಿ  ಗೋಮಾಂಸ ಮತ್ತು ದನಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾನೆ ಎಂದು ಶಂಕಿಸಿ ಥಳಿಸಿದ್ದಾರೆ.ಮೊಹಮ್ಮದ್ ಅಮೀರ್ ವಾಹನ ಚಲಾಯಿಸಿಕೊಂಡು ಮಥುರಾದ ಗೋವರ್ಧನದಿಂದ ಹತ್ರಾಸ್‍ನಲ್ಲಿರುವ ಸಿಕಂದರಾವ್ ಕಡೆಗೆ ಹೋಗುತ್ತಿದ್ದನು. ಕೆಲವು ಸ್ಥಳೀಯರು ಗುಂಪು ವ್ಯಾನ್‍ನನ್ನು ತಡೆದರು. ಗೋ ಮಾಂಸ ಸಾಗಾಟ ಮಾಡುತ್ತಾನೆ ಎಂದು ಅನುಮಾನಿಸಿ ಚಾಲಕನಿಗೆ ಮನಬಂದಂತೆ ಥಳಿಸಿದ್ದಾರೆ.


Spread the love

About Laxminews 24x7

Check Also

ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕಾಮಗಾರಿ ಕೈಗೊಳ್ಳಿ :ಶಾಸಕ ರಾಜು ಶೆಠ್

Spread the love ಫ್ಲೈಓವರ್ ಕಾಮಗಾರಿಗೆ ಸಂಬಂಧಿಸಿದ ಪ್ರಮುಖ ಪ್ರದೇಶಗಳ ಪರಿಶೀಲನೆ ನಾಗರಿಕರ ಸುರಕ್ಷತೆ, ತುರ್ತು ಸೇವೆಗಳ ಪ್ರವೇಶ ಮಾರ್ಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ