Breaking News

ವಾಹನ ಮಾರಾಟ ಮೇಳದ ಫೋಟೋ ಒಎಲ್ಎಕ್ಸ್​ನಲ್ಲಿ ಹಾಕಿ ಗ್ರಾಹಕರ ವಂಚಿಸುತ್ತಿದ್ದ ಖತರ್ನಾಕ್​ ಗ್ಯಾಂಗ್​ ಅಂದರ್​

Spread the love

ಬೆಳಗಾವಿ : ಮೇಳದಲ್ಲಿ ಮಾರಾಟಕ್ಕಿಟ್ಟ ವಾಹನಗಳ ಫೋಟೋ ತೆಗೆದು ಅದನ್ನು ಒಎಲ್​ಎಕ್ಸ್​ನಲ್ಲಿ ಹಾಕಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುವುದು ಎಂದು ನಂಬಿಸಿ ಮೋಸ ಮಾಡುತ್ತಿದ್ದ ಗ್ಯಾಂಗ್‌ನ ಬೆಳಗಾವಿ ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಧಾರವಾಡ ಮೂಲದ ಆರೋಪಿ ಶಿವಾನಂದ ಧೂಪದಾಳ, ಬೆಳಗಾವಿಯ ಅಬ್ದುಲ್ ಮತ್ತು ಜುಬೇರ್ ಬಂಧಿತ ಆರೋಪಿಗಳು. ಮೂವರು ಆರೋಪಿಗಳನ್ನು ವಂಚನೆ ಕೇಸ್​ ಅಡಿ ಹಿಂಡಲಗಾ ಜೈಲಿಗೆ ಅಟ್ಟಲಾಗಿದೆ.

ವಂಚನೆ ಹೇಗೆ?: ವಾಹನ ಮೇಳದಲ್ಲಿ ಪ್ರದರ್ಶಿಸಲಾಗುವ ಮಿನಿ ಲಾರಿಗಳು, ಟಾಟಾ ಏಸ್​ಗಳು, ಬೈಕ್​ಗಳ ಬಗ್ಗೆ ಮಾಹಿತಿ ಪಡೆದು ನಂತರ ಆ ವಾಹನಗಳ ಫೋಟೋವನ್ನು ಒಎಲ್ಎಕ್ಸ್​​ನಲ್ಲಿ ಹಾಕಿ, ಕಡಿಮೆ ಬೆಲೆ ನಿಗದಿ ಮಾಡುತ್ತಿದ್ದರು.

ಹೇಗೆಲ್ಲಾ ಮೋಸ ಮಾಡ್ತಿದ್ದರು?: ಬೆಂಗಳೂರು ಮೂಲದ ರವಿಕುಮಾರ್ ಎಂಬುವರು ಒಎಲ್​ಎಕ್ಸ್​ನಲ್ಲಿ ಅಶೋಕ ಲೇಲ್ಯಾಂಡ್​ ವಾಹನವನ್ನು ಕಂಡು, ಅದನ್ನು ಖರೀದಿಸಲು ಅಲ್ಲಿದ್ದ ಸಂಪರ್ಕ ಸಂಖ್ಯೆಗೆ ಕರೆ ಮಾಡಿದ್ದಾರೆ.

ಈ ವೇಳೆ ವಂಚಕ ಗ್ಯಾಂಗ್​ನಲ್ಲಿ ಒಬ್ಬರು ನೀವು ಬೆಳಗಾವಿಗೆ ಬನ್ನಿ ಎಂದು ರವಿಕುಮಾರ್​​ ಅವರಿಗೆ ಸೂಚಿಸಿದ್ದಾರೆ. ಅಲ್ಲದೇ, ಯಾವುದೋ ಮೇಳದಲ್ಲಿ ವಾಹನವನ್ನು ತೋರಿಸಿದ್ದಾರೆ.


Spread the love

About Laxminews 24x7

Check Also

ಚಿತ್ರದುರ್ಗ ಬಸ್​ ದುರಂತ: ಗಾಯಗೊಂಡಿದ್ದ ಬಸ್​ ಚಾಲಕ ಸಾವು

Spread the loveಹುಬ್ಬಳ್ಳಿ: ಚಿತ್ರದುರ್ಗದ ಹಿರಿಯೂರು-ಶಿರಾ ನಡುವಿನ ಜವನಗೊಂಡಹಳ್ಳಿ ಬಳಿ ಸಂಭವಿಸಿದ್ದ ಬಸ್​ ​ದುರಂತದಲ್ಲಿ ಗಾಯಗೊಂಡಿದ್ದ ಖಾಸಗಿ ಬಸ್ ಚಾಲಕ ಶಿಗ್ಗಾವಿಯ ಮೊಹಮ್ಮದ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ