ಇಲ್ಲೊಬ್ಬ ಯುವಕ ಮೂರು ನಾಗರಹಾವಿನೊಂದಿಗೆ ಆಟವಾಡಿದ್ದಾನೆ. ಕೊನೆಗೆ ಒಂದು ಹಾವು ಆತನ ಕಾಲಿಗೆ ಕಚ್ಚಿಕೊಂಡಿರುವ ಭಯಾನಕ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆನಾಗರ ಹಾವಿನೊಂದಿಗ ಆಟವೆಂದರೆ ಜೀವವನ್ನು ಪಣಕ್ಕಿಡುವ ಆಟ ಎಂದು ಹೇಳುತ್ತಾರೆ.
ಇಲ್ಲೊಬ್ಬ ಯುವಕ ಮೂರು ನಾಗರಹಾವಿನೊಂದಿಗೆ ಆಟವಾಡಿದ್ದಾನೆ. ಕೊನೆಗೆ ಒಂದು ಹಾವು ಆತನ ಕಾಲಿಗೆ ಕಚ್ಚಿಕೊಂಡಿರುವ ಭಯಾನಕ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮಾಜ್ ಸಯೀದ್ ಎನ್ನುವ ಯುವಕ ಮೂರು ನಾಗರ ಹಾವುಗಳ ಎದುರು ಕುಳಿತು ಅವುಗಳೊಂದಿಗೆ ಆಟವಾಡಿದ್ದಾನೆ. ಟ್ವಿಟರ್ನಲ್ಲಿ ಈ ಆತಂಕಕಾರಿ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಸುಸಾಂತ್ ನಂದ ಹಂಚಿಕೊಂಡಿದ್ದಾರೆ.
This is just horrific way of handling cobras…
The snake considers the movements as threats and follow the movement. At times, the response can be fatal pic.twitter.com/U89EkzJrFc— Susanta Nanda (@susantananda3) March 16, 2022
ವಿಡಿಯೋದಲ್ಲಿ ಯುವಕ ಮೂರು ಹಾವುಗಳ ಎದುರು ಕುಳಿತು ಕೈಗಳನ್ನು ಆಡಿಸುತ್ತಾನೆ. ಅದಕ್ಕೆ ತಕ್ಕಂತೆ ಹಾವುಗಳು ಕುಣಿಯುತ್ತವೆ. ಅವುಗಳ ತಲೆಯನ್ನು ಮುಟ್ಟಿ ಹಾವುಗಳಿಗೆ ಕೋಪತರಿಸಿದ್ದಾನೆ. ಇದರಿಂದ ಇಂದು ಹಾವು ಹಾರಿ ಆತನ ಕಾಲಿಗೆ ಕಚ್ಚಿ ಹಿಡಿದಿದೆ. ಇದನ್ನು ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. ತಜ್ಞರು ಕೂಡ ಇದು ಅಪಾಯಕಾರಿ ಎಂದಿದ್ದಾರೆ.
ಸ್ನೇಕ್‌ಬೈಟ್ ಹೀಲಿಂಗ್ ಅಂಡ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷೆ ಮತ್ತು ಸಂಸ್ಥಾಪಕಿ ಪ್ರಿಯಾಂಕಾ ಕದಮ್ ಫೇಸ್‌ಬುಕ್ ನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿದ್ದು ಸಯದ್ ಅವರನ್ನು ಹಾವು ಕಚ್ಚಿದ ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಆಸ್ಪತ್ರೆಗೆ ದಾಖಲಿಆದ ಸೈಯದದ ಅವರಿಗೆ 46 ಆಯಂಟಿ ಬಯೋಟಿಕ್ಗಳನ್ನು ನಿಡಲಾಗಿದೆ ಎಂದು ವರದಿ ತಿಳಿಸಿದೆ.