ಬೆಂಗಳೂರು: ಸ್ಯಾಂಡಲ್‍ವುಡ್ ನಟ ಡಾ.ಪುನೀತ್ ರಾಜ್‍ಕುಮಾರ್ ಸಮಾಧಿಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಭೇಟಿ ನೀಡಿ ದರ್ಶನ ಪಡೆದರು.ಇಂದು ಪುನೀತ್ ರಾಜ್‍ಕುಮಾರ್ 47ನೇ ಹುಟ್ಟುಹಬ್ಬದ ಹಿನ್ನೆಲೆ ನಗರದ ಕಂಠೀರವ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಭೇಟಿ ನೀಡಿ ಪ್ರದಕ್ಷಿಣೆ ಹಾಕಿ ನಮನ ಸಲ್ಲಿಸಿದರು. ಇದೇ ವೇಳೆ ವರನಟ ಡಾ. ರಾಜ್‍ಕುಮಾರ್ ಹಾಗೂ ಪಾರ್ವತಮ್ಮ ರಾಜ್‍ಕುಮಾರ್ ಅವರ ಸಮಾಧಿಯ ದರ್ಶನವನ್ನು ಸಹ ಪಡೆದರು.
ಅಪ್ಪು ಜನುಮ ದಿನದ ಪ್ರಯುಕ್ತ ಇಂದು ಪುನೀತ್ ಅಭಿನಯದ ಬಹುನಿರೀಕ್ಷಿತ ಜೇಮ್ಸ್ ಸಿನಿಮಾ ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಲು ಮುಂಜಾನೆಯಿಂದಲೇ ಚಿತ್ರಮಂದಿರದತ್ತ ಜನ ಸಾಗರವೇ ಹರಿದುಬರುತ್ತಿದೆ. ಒಟ್ಟಾರೆ ಅಪ್ಪು ಹುಟ್ಟುಹಬ್ಬವನ್ನು ಕರುನಾಡಿನ ಜನತೆ ಹಬ್ಬದಂತೆ ಆಚರಿಸುತ್ತಿದ್ದಾರೆ
Laxmi News 24×7