ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ರಾಜ್ಯಾ ಸುಮಾರು 78 ಕಡೆ ಎಸಿಬಿ ಮಿಂಚಿನ ದಾಳಿ ನಡೆಸಿದೆ. ರಾಯಚೂರಿನಲ್ಲಿ ಅಶೋಕ್ ರೆಡ್ಡಿ ಮನೆಗೆ ರೇಡ್ ಮಾಡಲು ಬಂದ ಎಸಿಬಿ ಅಧಿಕಾರಿಗಳನ್ನು ನೋಡಿ ಮನೆ ಕೆಲಸದಾಕೆ ಬೀಗರೆಂದು ಭಾವಿಸಿ ಸ್ವಾಗತಿಸಿದ್ದಾರೆ.
ಎಸಿಬಿ 18 ಮಂದಿ ಸರ್ಕಾರಿ ಭ್ರಷ್ಟ ಕುಬೇರರ ಜನ್ಮ ಜಾಲಾಡಿದೆ. ಬೆಂಗಳೂರು, ಮೈಸೂರು, ಮಂಗಳೂರು, ಹಾಸನ, ಚಾಮರಾಜನಗರ, ತುಮಕೂರು, ಚಿಕ್ಕಮಗಳೂರು ಹೀಗೆ ಹಲವೆಡೆ ಏಕಕಾಲಕ್ಕೆ ರೇಡ್ ಆಗಿದೆ. ಈ ವೇಳೆ ಅಪಾರ ಪ್ರಮಾಣದ ನಗದು, ಚಿನ್ನಾಭರಣಗಳು, ದಾಖಲೆ ಪತ್ರಗಳು ಸೇರಿದಂತೆ ನೋಟು ಎಣಿಸುವ ಮಿಷನ್ ಕೂಡ ಸಿಕ್ಕಿದೆ. ಸರ್ಕಾರಿ ಅಧಿಕಾರಿಗಳ ಮನೆಯಲ್ಲಿ ಕಂಡಕಂಡಲೆಲ್ಲ ಕಾಂಚಾಣ ಹರಿದಾಡುತ್ತಿದೆ. ಡಸ್ಟ್‍ಬಿನ್, ಖಾಲಿ ಸೈಟ್, ಟ್ಯಾಂಕ್, ಡ್ರಮ್‍ಗಳಲ್ಲೆಲ್ಲ ಹಣ ಮುಚ್ಚಿಟ್ಟಿದ್ದಾರೆ. ಮನೆಗಳು, ಫ್ಲ್ಯಾಟ್‍ಗಳು, ವಾಹನಗಳು, ಜಮೀನುಗಳಂತೂ ಲೆಕ್ಕಕ್ಕೇ ಇಲ್ಲದಂತಾಗಿದೆ. ರಾಯಚೂರಿನ ಅಶೋಕ್ ರೆಡ್ಡಿ ಮನೆಗೆ ರೇಡ್ ಮಾಡಲು ಬಂದ ಎಸಿಬಿ ಅಧಿಕಾರಿಗಳನ್ನು ನೋಡಿ ಮನೆ ಕೆಲಸದಾಕೆ ಬೀಗರೆಂದು ಭಾವಿಸಿ ಸ್ವಾಗತಿಸಿದ್ರು. ನಾವು ಎಸಿಬಿಯವರು ಅಂದ್ರೂ ಆಕೆಗೆ ಅರ್ಥ ಆಗಿರಲಿಲ್ಲ.