ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಇಂದು ಬೆಳಗ್ಗೆ ರಾಜ್ಯದ ವಿವಿಧೆಡೆ 18 ಮಂದಿ ಸರ್ಕಾರಿ ಅಧಿಕಾರಿಗಳ ಮನೆಗಳು ಹಾಗೂ ಕಚೇರಿಗಳು ಸೇರಿದಂತೆ ಒಟ್ಟು 77 ಕಡೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿ, ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ.
ಅಧಿಕಾರಿಗಳ ಮನೆಗಳಲ್ಲಿ ಚಿನ್ನಾಭರಣ, ಬೆಳ್ಳಿಯ ವಸ್ತುಗಳು ಹಾಗು ಶ್ರೀಗಂಧದ ತುಂಡುಗಳು ಸೇರಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪತ್ರಗಳು ದೊರೆತಿವೆ.
1. ಗೋಪಿನಾಥ್ ಎನ್.ಮಾಳಗಿ, ಪ್ರಾಜೆಕ್ಟ್ ಮ್ಯಾನೇಜರ್, ನಿರ್ಮಿತಿ ಕೇಂದ್ರ, ವಿಜಯಪುರ: ವಿಜಯಪುರದಲ್ಲಿರುವ ವಾಸದ ಮನೆ, ಬಾಗಲಕೋಟೆ ತಾಲೂಕಿನಲ್ಲಿರುವ ಫಾರ್ಮ್ ಹೌಸ್, ಸಂಬಂಧಿಕರು ಹಾಗೂ ಇವರ ಕಚೇರಿಯ ಸಿಬ್ಬಂದಿಯ ಮನೆ ಮತ್ತು ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಸೇರಿದಂತೆ ಒಟ್ಟು 5 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದ್ದು, ಶೋಧ ಕಾರ್ಯ ಇನ್ನೂ ಮುಂದುವರೆದಿದೆ.
2. ಶಿವಾನಂದ್ ಪಿ.ಶರಣಪ್ಪ ಖೇಡಗಿ, RFO, ಬಾದಾಮಿ: ಬಾಗಲಕೋಟೆ ನಗರದಲ್ಲಿನ ವಾಸದ ಮನೆ, ಸಂಬಂಧಿಕರ 2 ವಾಸದ ಮನೆಗಳು, ಮಗ ನಡೆಸುತ್ತಿರುವ ಎಲೆಕ್ಟ್ರಿಕ್ ಅಂಗಡಿ, ಬಾದಾಮಿಯ ಆರ್‌ಎಫ್ಓ ಕಚೇರಿ ಸೇರಿದಂತೆ ಒಟ್ಟು 5 ಸ್ಥಳಗಳಲ್ಲಿ ದಾಳಿ ನಡೆಸಲಾಗಿದ್ದು, ಪರಿಶೀಲನೆ ಮುಂದುವರೆದಿದೆ.
3. ಬಾಲಕೃಷ್ಣ ಹೆಚ್.ಎನ್, ಪೊಲೀಸ್ ಇನ್ಸ್‌ಪೆಕ್ಟರ್, ವಿಜಯನಗರ ಪೊಲೀಸ್ ಠಾಣೆ, ಮೈಸೂರು: ಮೈಸೂರು ನಗರದ ವಿಜಯನಗರದ ವಾಸದ ಮನೆ, ಚನ್ನರಾಯಪಟ್ಟಣ ಟೌನ್‌ನಲ್ಲಿನ 2 ವಾಸದ ಮನೆಗಳು, ಇವರು ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಸೇರಿದಂತೆ ಒಟ್ಟು 4 ಸ್ಥಳಗಳಲ್ಲಿ ದಾಳಿ ನಡೆದಿದೆ.
4. ಚಲುವರಾಜ್, ಅಬಕಾರಿ ನಿರೀಕ್ಷಕರು, ಗುಂಡ್ಲುಪೇಟೆ ತಾಲೂಕು: ಈ ಸರ್ಕಾರಿ ನೌಕರನಿಗೆ ಸೇರಿದ ಮೈಸೂರಿನ ಶ್ರೀರಾಂಪುರ ನಗರದಲ್ಲಿನ ವಾಸದ ಮನೆ, ಚಾಮರಾಜನಗರದಲ್ಲಿನ ಸ್ನೇಹಿತನ ವಾಸದ ಮನೆ, ಬೆಂಗಳೂರು ನಗರದ ಸುಂಕದಕಟ್ಟೆಯಲ್ಲಿ ಇವರ ಮಾವ ವಾಸವಿರುವ ಮನೆ, ರಾಮನಗರದಲ್ಲಿ ಮನೆ ಹಾಗೂ ಇವರು ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಸೇರಿದಂತೆ ಒಟ್ಟು 5 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.
5. ಸಿ.ಮಂಜುನಾಥ್, ಸಹಾಯಕ ಆಯುಕ್ತ, ರಾಮನಗರ: ಬೆಂಗಳೂರು ನಗರದ ಬ್ಯಾಟರಾಯನಪುರದಲ್ಲಿನ 3 ವಾಸದ ಮನೆಗಳು, ಯಲಹಂಕ ತಾಲ್ಲೂಕಿನ ಕಗ್ಗೇಹಳ್ಳಿ ಗ್ರಾಮದಲ್ಲಿನ ಫಾರ್ಮ್ ಹೌಸ್, ಜಕ್ಕೂರು ಗ್ರಾಮದಲ್ಲಿನ ಇವರ ಸಂಬಂಧಿಕರ ವಾಸದ ಮನೆ ಹಾಗೂ ರಾಮನಗರದ ಉಪ ವಿಭಾಗಾಧಿಕಾರಿಗಳ ಕಚೇರಿ ಸೇರಿ ಒಟ್ಟು 6 ಸ್ಥಳಗಳಲ್ಲಿ ದಾಳಿ ನಡೆಸಲಾಗಿದ್ದು, ಶೋಧ ಮುಂದುವರೆದಿದೆ.
6. ಎ. ಶ್ರೀನಿವಾಸ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ: ಬನಶಂಕರಿ 1ನೇ ಹಂತ, ಬೆಂಗಳೂರು ಇಲ್ಲಿನ ವಾಸದ ಮನೆ, ಬ್ಯಾಟರಾಯನಮಠ, ಬೆಂಗಳೂರು ಇಲ್ಲಿನ ಸಂಬಂಧಿಕರ ಮನೆ, ತುಮಕೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ ಒಟ್ಟು 3 ಫಾರ್ಮ್ ಹೌಸ್‌ಗಳು ಹಾಗೂ ಎಂ. ಎಸ್ ಬಿಲ್ಡಿಂಗ್‌ನಲ್ಲಿನ ಇವರು ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿಯಲ್ಲಿ ಅಧಿಕಾರಿಗಳ ಶೋಧ ಕಾರ್ಯ ಚುರುಕುಗೊಳಿಸಲಾಗಿದೆ.
7. ಕೆ. ಶಿವಕುಮಾರ್, ಹೆಚ್ಚುವರಿ ನಿರ್ದೇಶಕ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಖನಿಜ ಭವನ: ಕಿರ್ಲ್ಲೋಸ್ಕರ್ ಕಾಲೋನಿ ಬಸವೇಶ್ವರ ನಗರದಲ್ಲಿನ ವಾಸದ ಮನೆ, ಸಂಬಂಧಿಕರ ಅಮರ ಜ್ಯೋತಿ ಬಡಾವಣೆ, ಶಂಕರ ಮಠ, ಬೆಂಗಳೂರು ನಗರದಲ್ಲಿನ ವಾಸದ ಮನೆ, ಮಹಾಲಕ್ಷ್ಮೀಪುರಂ, ವೆಸ್ಟ್ ಆಫ್ ಅಂರ್ಡ್ ರೋಡ್ ನಲ್ಲಿರುವ ವಾಸದ ಮನೆ, ತುಮಕೂರು ಅಸ್ತಿಹಳ್ಳಿಯಲ್ಲಿನ ಫಾರ್ಮ್ ಹೌಸ್ ಮತ್ತು ಇವರು ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿ ಸೇರಿದಂತೆ ಒಟ್ಟು 5 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ.
8. ಜ್ಞಾನೇಂದ್ರ ಕುಮಾರ್, ಹೆಚ್ಚುವರಿ ಆಯುಕ್ತ ಸಾರಿಗೆ, ಟ್ರಾಡ್ ಸಾರಿಗೆ ಮತ್ತು ಸುರಕ್ಷತೆ,ಬೆಂಗಳೂರು: ಬೆಂಗಳೂರು ನಗರದ ಬಸವೇಶ್ವರ ನಗರದಲ್ಲಿನ ವಾಸದ ಮನೆ, ಅವರ ಸಂಬಂಧಿಕರ ಆರೋಗ್ಯ ಬಡಾವಣೆ ಶ್ರೀಗಂಧ ಕಾವಲಿನಲ್ಲಿನ ವಾಸದ ಮನೆ, ಪರಿಚಿತರ ಮಾನ್ಯತಾ ಟೆಕ್ ಪಾರ್ಕ್ ಹತ್ತಿರದ ಝನಿತ್ ಅಪಾರ್ಟ್‌ಮೆಂಟ್‌ನ ಪ್ಲ್ಯಾಟ್ ಹಾಗೂ ಇವರು ಕಾರ್ಯ ನಿರ್ವಹಿಸುತ್ತಿರುವ ಕಚೇರಿ ಸೇರಿ ಒಟ್ಟು 4 ಸ್ಥಳಗಳಲ್ಲಿ ದಾಳಿ ನಡೆಸಲಾಗಿದ್ದು, ಪರಿಶೀಲನೆ ನಡೆಯುತ್ತಿದೆ.
9. ವಿ. ರಾಕೇಶ್ ಕುಮಾರ್, ನಗರ ಯೋಜನೆ ಉಪ ನಿರ್ದೇಶಕರು ಬೆಂಗಳೂರು: ನಾಗರಭಾವಿಯ ಎರಡು ದಾನದ ಮನೆಗಳು, ಸಂಬಂಧಿಕರ ಕಲ್ಯಾಣ ನಗರ ಬೆಂಗಳೂರು ನಗರದಲ್ಲಿನ ವಾಸದ ಮನೆ, ಇವರ ಸ್ವಂತ ಊರಾದ ತುಮಕೂರು ಅಲ್ಲೆ ಮಧುಗಿರಿ ತಾಲ್ಲೂಕಿನಲ್ಲಿನ ವಾಸದ ಮನೆ, ಇವರು ಕರ್ತವ್ಯ ನಿರ್ವಹಿಸುತ್ತಿರುವ ಅಡಿಎ ನಗರ ಯೋಜನೆಯ ಕಚೇರಿ ಸೇರಿ ಒಟ್ಟು 5 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.