ಬೆಂಗಳೂರು : ಬಿಜೆಪಿ ಸರ್ಕಾರಕ್ಕೆ ಜನತೆ ಒಮ್ಮೆಯೂ ಬಹುಮತದಿಂದ ಅಧಿಕಾರ ನೀಡಲಿಲ್ಲ. ಕುದುರೆ, ವ್ಯಾಪಾರದಿಂದ ಆಡಳಿತಕ್ಕೆ ಬಂದಿದ್ದಾರೆ. ಮುಖ್ಯಮಂತ್ರಿ ಆಗಬೇಕು, ಮಂತ್ರಿ ಆಗಬೇಕು ಎನ್ನುವ ಕಾರಣದಿಂದ ಅಧಿಕಾರಕ್ಕೆ ಬಂದವರಿಂದ ಶೇ.40 ಪರ್ಸಂಟೇಜ್ ಹೊರತುಪಡಿಸಿ, ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಕಾಂಗ್ರೆಸ್ ಸದಸ್ಯ ಆರ್ ಬಿ ತಿಮ್ಮಾಪೂರ್ ಬಿಜೆಪಿ ಸರ್ಕಾರವನ್ನು ಟೀಕಿಸಿದರು.
ಜನತೆ ಬಿಜೆಪಿಗೆ ಸ್ವತಂತ್ರ್ಯವಾಗಿ ಅಧಿಕಾರ ನೀಡಿಲ್ಲ: ವಿಧಾನಪರಿಷತ್ನಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆ ಒಮ್ಮೆಯೂ ಬಿಜೆಪಿಗೆ ಸ್ವತಂತ್ರ್ಯವಾಗಿ ಅಧಿಕಾರ ಕೊಡಲಿಲ್ಲ. ಕುದುರೆ ವ್ಯಾಪಾರ ನಡೆಯಿತು, ಬಾಂಬೆಗೆ ಹೋದರು. ಒಬ್ಬರು ಸಿಎಂ ಆಗಬೇಕೆಂದು, ಮತ್ತೊಬ್ಬರು ಮಂತ್ರಿ ಆಗಬೇಕು ಎಂದು ರೆಸಾರ್ಟ್ಗೆ ಓಡಿಹೋದರು.
ಇವರಿಗೆ ರಾಜ್ಯದ ಹಿತ ಕಾಯುವುದು ಬೇಕಿಲ್ಲ. ಸಿಎಂ, ಮಂತ್ರಿಗಳಾಗಬೇಕಿತ್ತು, ಅದಕ್ಕಾಗಿ ಅಧಿಕಾರಕ್ಕೆ ಬಂದರು. ಇವರಿಂದ ನಾವು ಏನು ನಿರೀಕ್ಷೆ ಮಾಡಬಹುದು? 40 % ಕಮಿಷನ್ ನಿರೀಕ್ಷೆ ಮಾಡಬಹುದು ಅಷ್ಟೇ.. ಬಾಂಬೆಯಿಂದ ಓಡಾಡಲು ಹೆಲಿಕ್ಯಾಪ್ಟರ್ ಯಾರು ಕೊಟ್ಟರು, ಹೋಟೆಲ್ ಬಿಲ್ ಯಾರು ಕೊಟ್ಟರು, ಸೂಟ್ ಕೇಸ್ ಯಾರು ಕೊಟ್ಟರು. ಮೊದಲು ಗೋವಾ ನಂತರ ಬಾಂಬೆಗೆ ಕರೆದೊಯ್ದರು ಎಂದು ಕಿಡಿಕಾರಿದರು.