Breaking News

ಹಿಜಬ್ ಪ್ರಕರಣ ದೊಡ್ಡದಾಗಲು ಸರ್ಕಾರವೇ ಕಾರಣವಾಗಿದೆ: H.D.D.

Spread the love

ನವದೆಹಲಿ: ಪ್ರಾರಂಭದಲ್ಲಿ ಒಂದು ಸಣ್ಣ ಕಿಡಿ ಕರಾವಳಿಯಲ್ಲಿ ಶುರುವಾಯಿತು. ಈ ಬಗ್ಗೆ ಎರಡೂ ರಾಷ್ಟ್ರೀಯ ಪಕ್ಷಗಳು ಉಗ್ರವಾಗಿ ಹೋರಾಟ ಮಾಡಿವೆ. ಹಿಜಬ್ ಪ್ರಕರಣ ಸಣ್ಣದಾಗಿದ್ದಾಗಲೇ ಚಿವುಟಿ ಹಾಕಬಹುದಿತ್ತು. ಹಿಜಬ್ ಪ್ರಕರಣ ದೊಡ್ಡದಾಗಲು ಸರ್ಕಾರವೇ ಕಾರಣವಾಗಿದೆ ಎಂದು ಮಾಜಿ ಪ್ರಧಾನಿ ಎಚ್‍.ಡಿ ದೇವೇಗೌಡ ಹೇಳಿಕೆ

ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ತೀರ್ಪು ಒಪ್ಪ ಬೇಕೆಂಬುದು ನಮ್ಮ ಪಕ್ಷದ ನಿಲುವು ಇದೇ ಆಗಿತ್ತು. ಈ ವಿಷಯದಲ್ಲಿ ರಾಜಕೀಯ ಲಾಭ-ನಷ್ಟದ ಬಗ್ಗೆ ಇಲ್ಲ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅಡೆತಡೆ ಇರಬಾರದು. ಮೊದಲಿನಿಂದಲೂ ನನ್ನದು ಇದೇ ನಿಲುವಾಗಿದೆ. ಸುಪ್ರೀಂ ಕೋರ್ಟ್‍ಗೆ ಹೋಗುವವರನ್ನು ಯಾರು ತಡೆಯಲು ಸಾಧ್ಯ? ಹೈಕೋರ್ಟ್ ತೀರ್ಪನ್ನು ಎಲ್ಲರೂ ಒಪ್ಪಿ ಶಾಂತಯುತವಾಗಿರಬೇಕು. ರಾಜ್ಯದಲ್ಲಿ ಶಾಂತಿ ನೆಲಸಲು ವಿದ್ಯಾರ್ಥಿಗಳು, ಪೋಷಕರಿಗೆ ಮನವಿ ಮಾಡುತ್ತೇನೆ. ಸುಪ್ರೋ ಕೋರ್ಟಿನಲ್ಲಿ ಅರ್ಜಿ ಹಾಕುವವರು, ಪೋಷಕರು ಹೈಕೋರ್ಟ್ ತೀರ್ಪನ್ನು ಒಪ್ಪಿಕೊಂಡು ಮುನ್ನಡೆಯುವುದು ಒಳ್ಳೆಯದು ಎಂದಿದ್ದಾರೆ.

ಪ್ರಾರಂಭದಲ್ಲಿ ಒಂದು ಸಣ್ಣ ಕಿಡಿ ಕರಾವಳಿಯಲ್ಲಿ ಶುರುವಾಯಿತು. ಈ ಬಗ್ಗೆ ಎರಡೂ ರಾಷ್ಟ್ರೀಯ ಪಕ್ಷಗಳು ಉಗ್ರವಾಗಿ ಹೋರಾಟ ಮಾಡಿವೆ. ಸಿಎಂ ಬಸವರಾಜ ಬೊಮ್ಮಾಯಿ ತಕ್ಷಣವೇ ಎಲ್ಲಾ ಪಕ್ಷದವರ ಜೊತೆ ಚರ್ಚಿಸಿ ಹತ್ತಿಕ್ಕಬಹುದಿತ್ತು. ಹಿಜಬ್ ಪ್ರಕರಣ ದೊಡ್ಡದಾಗಲು ಸರ್ಕಾರವೇ ಕಾರಣವಾಗಿದೆ. ರಾಜ್ಯ ಸರ್ಕಾರ ಹಿಜಾಬ್ ಪ್ರಕರಣ ನಿಭಾಯಿಸಲು ವಿಫಲವಾಯಿತು. ಈಗ ಸುಪ್ರೀಂ ಕೋರ್ಟಿಗೆ ಹೋಗುತ್ತಿರುವುದರಿಂದ ಇನ್ನೂ ಕೆಟ್ಟ ವಾತಾವರಣ ನಿರ್ಮಾಣವಾಗುತ್ತದೆ. ಹಿಂದಿನ ಹಲವಾರು ಘಟನೆಗಳಿಂದಲೇ ರಾಜಕೀಯ ಲಾಭ ಮಾಡಿಕೊಳ್ಳುತ್ತಿದೆ ಎಂದು ಬಿಜೆಪಿ ಪಕ್ಷದ ವಿರುದ್ಧವಾಗಿ ಕಿಡಿಕಾರಿದ್ದಾರೆ.


Spread the love

About Laxminews 24x7

Check Also

ಬಿಹಾರ ಫಲಿತಾಂಶ ಬಳಿಕ ಸಂಪುಟ ಪುನಾರಚನೆ?

Spread the love ಬೆಂಗಳೂರು: ಸಿಎಂ ಸಿದ್ದರಾಮಯ್ಯ ಈಗಾಗಲೇ ಸಂಪುಟ ಪುನಾರಚನೆಯ ಸುಳಿವು ನೀಡಿದ್ದಾರೆ. ಈ ನಿಟ್ಟಿ‌ನಲ್ಲಿ ಚರ್ಚೆ ನಡೆಸಲು ನ.15ರಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ