ಚಂಡೀಗಢ: ಸಿಖ್ಖರ ನಾಡಿನಲ್ಲಿ ಇದೇ ಮೊದಲ ಬಾರಿ ಆಮ್ ಆದ್ಮಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದು, ಇಂದು ಸಿಎಂ ಆಗಿ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಹುಟ್ಟೂರಾದ ಖಾಟ್ಕರ್ ಕಲಾನ್‍ನಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಲಿದ್ದು, ಆಪ್ ನಾಯಕರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ರಾಜಧಾನಿಯ ಹೊರಗೆ ಪ್ರಮಾಣ ವಚನ ನಡೀತಿರೋದು ವಿಶೇಷವಾಗಿದ್ದು, ಸಿಎಂ ಜೊತೆ 18 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 3 ಲಕ್ಷ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ.
ಭಗವಂತ್ ಮಾನ್ ದುರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಇವರ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್‍ನ ದಲ್ವಿರ್ಸಿಂಗ್ ಗೋಲ್ಡಿ 24,306 ಮತಗಳಿಸಿದ್ದು, ಭಗವಂತ್ ಮಾನ್‍ಗೆ 82,023 ಮತಗಳನ್ನು ಗಳಿಸಿಸುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದರು. ಅಧಿಕಾರ ವಹಿಸಿಕೊಂಡ ನಂತರ ಅವರ ಮೊದಲ ವ್ಯವಹಾರದ ಆದೇಶವೆಂದರೆ ಶಾಲೆಗಳು, ಆರೋಗ್ಯ, ಉದ್ಯಮ, ಕೃಷಿಯನ್ನು ಲಾಭದಾಯಕವಾಗಿಸುವುದಾಗಿದೆ ಎಂದು ಗೆಲುವಿನ ಬಳಿಕ ಘೋಷಿಸಿದ್ದರು.