ಬೆಳಗಾವಿ-ಸಾಮಾಜಿಕ ಕಾರ್ಯಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲೂ ಪ್ರಸಿದ್ಧಿ ಪಡೆದಿರುವ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರ ಫೇಸ್ ಬುಕ್ ಪುಟವನ್ನು ಕೆಲವು ಕಿಡಗೇಡಿಗಳು ಹ್ಯಾಕ್ ಮಾಡಿದ್ದಾರೆ.
ಅಭಯ ಪಾಟೀಲ ಎಂಬ ಹೆಸರಿನಲ್ಲಿದ್ದ ವೇರಿಫೈಡ್ ಪೇಸ್ ಬುಕ್ ಪೇಜ್ ಹ್ಯಾಕ್ ಆಗಿದ್ದು, ಈ ಕುರಿತು ಶಾಸಕ ಅಭಯ ಪಾಟೀಲ ಬೆಳಗಾವಿಯ ಸೈಬರ್ ಕ್ರೈಂ, ಸಿಇಎನ್ ಪೋಲೀಸ್ ಠಾಣೆಗೆ ದೂರು ನೀಡಿದ್ದು ಇನೆಸ್ಪೆಕ್ಟರ್ ಗಡ್ಡೇಕರ ಅವರು ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿ ಹ್ಯಾಕರ್ ಗಳ ಪತ್ತೆಗೆ ತನಿಖೆ ಶುರು ಮಾಡಿದ್ದಾರೆ.
ಶಾಸಕ ಅಭಯ ಪಾಟೀಲ ಅವರ ಹೆಸರಿನಲ್ಲಿರುವ ಫೇಸ್ ಬುಕ್ ಪುಟಕ್ಕೆ ಸುಮಾರು 40 ಸಾವಿರಕ್ಕೂ ಹೆಚ್ವು ಫಾಲೋವರ್ಸ್ ಗಳಿದ್ದಾರೆ.ಈ ಪುಟಕ್ಕೆ ಶಾಸಕ ಅಭಯ ಪಾಟೀಲ ಮತ್ತು ಚೈತನ್ಯ ದಳವಿ ಇಬ್ಬರು ಅಡ್ಮಿನ್ ಗಳಿದ್ದಾರೆ. ನಿನ್ನೆ ರಾತ್ರಿ ಫೇಸ್ ಬುಕ್ ಪುಟ ಹ್ಯಾಕ್ ಆಗಿದ್ದು ಗೊತ್ತಾದ ಬಳಿಕ ಅವರು ಸೈಬರ್ ಕ್ರೈಂ ಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿರುವ ಸೈಬರ್ ಕ್ರೈಂ ಇನೆಸ್ಪೆಕ್ಡರ್ ಗಡ್ಡೇಕರ್ ಅವರು ಪೇಸ್ ಬುಕ್ ಪುಟ ಹ್ಯಾಕ್ ಆಗಿರುವ ವಿಚಾರವನ್ನು ಫೇಸ್ ಬುಕ್ ಅಥಾರಿಟಿಯ ಗಮನಕ್ಕೆ ತಂದಿದ್ದಾರೆ.
Laxmi News 24×7