ರಾಜಸ್ಥಾನದ ಕಾಂಗ್ರೆಸ್ ಮಂತ್ರಿ ಶಾಂತಿ ಕುಮಾರ್ ಧರಿವಾಲ್, ವಿಧಾನಸಭೆ ಕಲಾಪದ ವೇಳೆ ನಾಚಿಕೆಗೇಡಿನ ಹೇಳಿಕೆ ಕೊಟ್ಟು ಇದೀಗ ತಲೆತಗ್ಗಿಸಿದ್ದಾರೆ.
ನಿನ್ನೆ ನಡೆದ ವಿಧಾನಸಭೆ ಕಲಾಪದ ವೇಳೆ, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನ ಕೇಳಲಾಗಿತ್ತು.
ಅದಕ್ಕೆ ಉತ್ತರಿಸುವ ವೇಳೆ, ‘ರೇಪ್ನಲ್ಲಿ ರಾಜಸ್ಥಾನ ಮೊದಲ ಸ್ಥಾನದಲ್ಲಿ ಇದೆ. ಯಾಕೆ ನಾವು ನಂಬರ್ ಒನ್ ಸ್ಥಾನದಲ್ಲಿದ್ದೇವೆ..? ಯಾಕಂದರೆ ರಾಜಸ್ಥಾನ ಪುರಷರಿರುವ ರಾಜ್ಯ. ಅದಕ್ಕೆ ನಾವೇನು ಮಾಡೋಕೆ ಆಗುತ್ತೆ..?’ ಅನ್ನೋ ಮೂಲಕ ಬಾಲೀಶ ಹೇಳಿಕೆಯನ್ನ ನೀಡಿದ್ದಾರೆ.
ಧರಿವಾಲ್ ಸದನದಲ್ಲಿ ಈ ಹೇಳಿಕೆ ನೀಡಿದಾಗ ಸದನದಲ್ಲಿ ಕುಳಿತಿದ್ದ ಆಡಳಿತ ಪಕ್ಷದ ನಾಯಕರೂ ನಗೆಗಡಲಲ್ಲಿ ತೇಲಿದ್ದಾರೆ. ಅವರ ಹೇಳಿಕೆಗೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದವು. ಬಳಿಕ ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷದ ನಡುವೆ ಮಾತಿನ ಚಕಮಕಿ ನಡೆಯಿತು. ಬಿಜೆಪಿಯ ವಿರೋಧಕ್ಕೆ ಮತ್ತೆ ಉತ್ತರಿಸಿದ ಧರಿವಾಲ್, ಅತ್ಯಾಚಾರ ಪ್ರಕರಣದಲ್ಲಿ ನಾವೇ ನಂಬರ್ ಒನ್, ಇದರಲ್ಲಿ ಯಾವುದೇ ಅನುಮಾನವಿಲ್ಲ. ಯುಪಿ ಎರಡನೇ ಸ್ಥಾನದಲ್ಲಿದೆ ಮತ್ತು ಮಧ್ಯಪ್ರದೇಶ ಮೂರನೇ ಸ್ಥಾನದಲ್ಲಿದೆ ಎಂದರು
ವಾರಣಾಸಿ ಮಹಿಳೆಯರಿಗೆ ಸುರಕ್ಷಿತವಲ್ಲ
ಅತ್ಯಾಚಾರ ಮತ್ತು ಕೊಲೆಯಲ್ಲಿ ಯುಪಿ ಮೊದಲ ಸ್ಥಾನದಲ್ಲಿದೆ. ರೇಪ್ ವಿಥ್ ಮರ್ಡರ್ ಪ್ರಕರಣದಲ್ಲಿ ರಾಜಸ್ಥಾನ 11ನೇ ಸ್ಥಾನದಲ್ಲಿದೆ. ಅಸ್ಸಾಂ ನಾಲ್ಕನೇ ಸ್ಥಾನದಲ್ಲಿ, ಮಹಾರಾಷ್ಟ್ರ ಐದನೇ ಸ್ಥಾನದಲ್ಲಿ, ಒಡಿಶಾ ಆರನೇ ಸ್ಥಾನದಲ್ಲಿ, ತೆಲಂಗಾಣ ಏಳನೇ ಸ್ಥಾನದಲ್ಲಿದೆ. ಮಹಿಳೆಯರ ಮೇಲಿನ ದೌರ್ಜನ್ಯಗಳಲ್ಲಿ ಯುಪಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸುವ ಕ್ಷೇತ್ರ ವಾರಣಾಸಿ ಮಹಿಳೆಯರಿಗೆ ಸುರಕ್ಷಿತವಲ್ಲ ಎಂದೂ ನಂತರ ಆರೋಪ ಮಾಡಿದ್ದಾರೆ.
Shanti Kumar Dhariwal, minister in the Gehlot govt in Rajasthan admitting that Rajasthan is No. 1 in rape cases.
His excuse : Rajasthan Toh Mardon Ka Pradesh Raha Hai..
Priyanka’s Ladki Hoon Lad Sakti Hoon doesn’t apply in Congress ruled states..
What do the Gandhi’s have to say? pic.twitter.com/8adE42wNZP— Eagle Eye (@SortedEagle) March 9, 2022