ಮಂಗಳವಾರ ಬೆಳಗಾವಿಯ ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಇಲಾಖೆ ಕಚೇರಿಗೆ ಆಗಮಿಸಿದ ದೀಪಕ್ ವಾಘೇಲಾ ಮತ್ತು ಕೆಲ ನಿವೃತ್ತ ಪೌರ ಕಾರ್ಮಿಕರು ಇಲ್ಲಿನ ಸಹಾಯಕ ನಿರ್ದೇಶಕ ರಾಜು ನಾಯಿಕ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ವಾ.ಓ: 8 ವರ್ಷದಿಂದ ನಿವೃತ್ತ ಪೌರ ಕಾರ್ಮಿಕರ ಕೆಲಸ ಮಾಡಿ ಕೊಟ್ಟಿಲ್ಲ ಎಂದರೆ ಹೇಗೆ..? ಕೋವಿಡ್ ಸಂದರ್ಭದಲ್ಲಿ ನಮ್ಮ ಪೌರ ಕಾರ್ಮಿಕರ ಕೆಲಸದಿಂದ ನೀನು ಜೀವಂತ ಬದುಕಿದ್ದಿಯಾ..? ಅವರ ಪುಣ್ಯದಿಂದ ನೀನು ಈ ಕುರ್ಚಿಯಲ್ಲಿ ಕುಳಿತುಕೊಂಡಿದ್ದಿಯಾ..? ಹೊಟ್ಟೆಗೆ ಏನು ತಿಂತಿಯಾ ಎಂದು ದೀಪಕ್ ವಾಘೇಲಾ ಏಕವಚನದಲ್ಲಿಯೇ ತರಾಟೆಗೆ ತೆಗೆದುಕೊಂಡರು. ಇನ್ನು ಮೇಲೆ ಯಾರ ಬಳಿಯಾದ್ರೂ ಲಂಚ ತೆಗೆದುಕೊಂಡರೆ ನಿನ್ನ ಅರಿವೆಯನ್ನೇ ಬಿಚ್ಚಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಬಳಿಕಮಾತನಾಡಿದ ದೀಪಕ್ ವಾಘೇಲಾ ಶ್ರೀಪಾಲಮ್ಮ ದೇವಯ್ಯ ಅಬ್ರಹಾಂ ಮಹಾನಗರ ಪಾಲಿಕೆಯ ಪೌರಕಾರ್ಮಿಕರಾಗಿ ನಿವೃತ್ತಿಯಾಗಿ 10 ವರ್ಷ ಆಗಿದೆ. ಈಗ ಅವರ ಕಡೆಯಿಂದ ಸ್ಮಾಲ್ ಸ್ಕೇಲ್ ಸೇವಿಂಗ್‍ನಲ್ಲಿ 6540 ರೂಪಾಯಿಯನ್ನು ಹೆಚ್ಚುವರಿಯಾಗಿ ಕಟ್ ಮಾಡಿಕೊಂಡಿದ್ದಾರೆ. ಕಳೆದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಹಣವನ್ನು ಮರಳಿಸುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಆದರೆ ಆರು ತಿಂಗಳಾದ್ರೂ ಹಣ ಮರಳಿ ಕೊಟ್ಟಿಲ್ಲ. ಇಲ್ಲಿ ಅಧಿಕಾರಿ ನೋಡಿದ್ರೆ ನಾಲ್ಕನಾಲ್ಕು ಪೇಪರ್ ಹಿಡಿದುಕೊಂಡು ಓದಿಕೊಂಡು ಕುಳಿತುಕೊಳ್ಳುತ್ತಾರೆ. ಕೆಲಸ ಮಾಡೋದಿಲ್ಲ. ಸರ್ಕಾರ ಕೆಲಸ ಮಾಡಲು ಇವರಿಗೆ ಸಂಬಳ ಕೊಟ್ಟರೆ ಇವರು ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಮನೆಗೆ ಕಳಿಸಬೇಕು ಎಂದು ಆಗ್ರಹಿಸಿದರು.