ಬೆಂಗಳೂರು: ಗೋವಾ ಹಾಗೂ ಉತ್ತರಾಖಂಡ್ ದಲ್ಲಿ ಕಾಂಗ್ರೆಸ್ ಗೆಲುವಿನ ಸನಿಹ ಬಂದಿದೆ ಎಂದು ಎಕ್ಸಿಟ್ ಫೋಲ್ ಗಳಲ್ಲಿ ಬಂದ ಅಭಿಪ್ರಾಯ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಪ್ರಮುಖ ನಾಯಕರನ್ನು ಈ ಎರಡು ರಾಜ್ಯದಲ್ಲಿ ಸರಕಾರ ರಚಿಸುವ ಕಸರತ್ತಿಗೆ ನಿಯೋಜಿಸಿದೆ.
ಈ ಎರಡೂ ರಾಜ್ಯಗಳಲ್ಲಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ “ಆಪರೇಷನ್ ಕಮಲ” ಕಾರ್ಯಾಚರಣೆ ನಡೆಯಬಹುದೆಂದು ಕಾಂಗ್ರೆಸ್ ಊಹಿಸಿದೆ. ಈ ಹಿನ್ನೆಲೆಯಲ್ಲಿ ಈಗಿನಿಂದಲೇ ತಂತ್ರಗಾರಿಕೆ ಆರಂಭಿಸಿದೆ.
ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ನೇತೃತ್ವದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹಾಗೂ ಮಹಾರಾಷ್ಟ್ರದ ಸಚಿವರೊಬ್ಬರನ್ನು ಶಾಸಕರನ್ನು ಕಾಯುವುದಕ್ಕೆ ನಿಯೋಜನೆ ಮಾಡಲಾಗಿದೆ.