ಅಲ್ಪಸಂಖ್ಯಾತ ಸಮುದಾಯದವರಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನಾಯಕಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವೈರಲ್ ಆಗಿರುವ ವೀಡಿಯೊದಲ್ಲಿ, ಎಬಿವಿಪಿ ನಾಯಕಿ ಪೂಜಾ ವೀರಶೆಟ್ಟಿ “ನೀವು ನೀರು ಕೇಳಿದರೆ ನಾವು ಭಾರತೀಯರು ನಿಮಗೆ ಜ್ಯೂಸ್ ನೀಡುತ್ತೇವೆ.
ಹಾಲು ಬೇಕಾದರೆ ಮೊಸರು ಕೊಡುತ್ತೇವೆ. ಆದರೆ, ಭಾರತದಲ್ಲಿ ಎಲ್ಲರೂ ಹಿಜಾಬ್ ಧರಿಸಬೇಕೆಂದು ನೀವು ಬಯಸಿದರೆ, ನಾವು ಶಿವಾಜಿಯ ಕತ್ತಿಯಿಂದ ನಿಮ್ಮನ್ನು ತುಂಡು ತುಂಡಾಗಿ ಕತ್ತರಿಸುತ್ತೇವೆ. ನಮ್ಮ ದೇಶ ಕೇಸರಿಮಯವಾಗಿದೆ. ಭಜರಂಗದಳದ ಕಾರ್ಯಕರ್ತ ಹರ್ಷ ಹಿಂದೂ ಹತ್ಯೆ ಪ್ರಕರಣದಲ್ಲಿ ಎಲ್ಲರನ್ನೂ ಬಂಧಿಸಿರುವುದಕ್ಕೆ ನಮಗೆ ಸಂತೋಷವಾಗಿದೆ ಆದರೆ ಇದು ಸಾಕಾಗುವುದಿಲ್ಲ… ನಿಮಗೆ ಇದನ್ನು ಮಾಡಲು ಸಾಧ್ಯವಾಗದಿದ್ದರೆ, ನಮಗೆ 24 ಗಂಟೆಗಳ ಕಾಲಾವಕಾಶ ನೀಡಿ.” ಎಂದಿದ್ದು ಈಗ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಫೆಬ್ರವರಿ 23 ರಂದು ವಿಜಯಪುರದಲ್ಲಿ ಭಾಷಣ ಮಾಡಲಾಗಿದೆ ಎಂದು ವರದಿಯಾಗಿದೆ. ವಿಜಯಪುರ ಜಿಲ್ಲಾ ಪೊಲೀಸರು ವೀರಶೆಟ್ಟಿ ವಿರುದ್ಧ ತ್ವರಿತವಾಗಿ ಎಫ್‌ಐಆರ್ ದಾಖಲಿಸದಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದರು. ಕೊನೆಗೂ ಭಾನುವಾರ ಜಿಲ್ಲೆಯ ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295(ಎ), 505(2) ಮತ್ತು 506ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.