Breaking News

ಶಾಕಿಂಗ್ ನ್ಯೂಸ್: ಅಡುಗೆ ಎಣ್ಣೆ ದರ ಗಗನಕ್ಕೆ, ಖರೀದಿಗೆ ಮಿತಿ; 175 ರೂ.ಗಿಂತಲೂ ಏರಿಕೆ ಕಂಡ ಸೂರ್ಯಕಾಂತಿ ಎಣ್ಣೆ

Spread the love

ಬೆಂಗಳೂರು: ರಷ್ಯಾ -ಉಕ್ರೇನ್ ಯುದ್ಧದ ಪರಿಣಾಮದಿಂದಾಗಿ ಸೂರ್ಯಕಾಂತಿ ಎಣ್ಣೆ ದರ 175 ರೂಪಾಯಿವರೆಗೆ ಏರಿಕೆಯಾಗಿದ್ದು, ಯುದ್ಧ ಮುಂದುವರೆದಲ್ಲಿ ಸೂರ್ಯಕಾಂತಿ ಎಣ್ಣೆ ದರ ಮತ್ತಷ್ಟು ದುಬಾರಿಯಾಗಿ 200 ರೂ.ವರೆಗೂ ತಲುಪುವ ಸಾಧ್ಯತೆಯಿದೆ.

ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಎಣ್ಣೆ ದರ 40 ರೂ.ನಷ್ಟು ಏರಿಕೆ ಕಂಡಿದೆ.

ಇದರ ಪರಿಣಾಮ ಹಲವು ಕಡೆಗಳಲ್ಲಿ ಅಡುಗೆ ಎಣ್ಣೆ ಖರೀದಿಗೆ ಗ್ರಾಹಕರಿಗೆ ಮಿತಿ ಹೇರಲಾಗಿದೆ. ಯುದ್ಧದ ಕಾರಣದಿಂದಾಗಿ ಸೂರ್ಯಕಾಂತಿ ಎಣ್ಣೆ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ದರ ಇನ್ನಷ್ಟು ಏರಿಕೆಯಾಗಬಹುದು ಎಂದು ಹೇಳಲಾಗಿದೆ.

ಯುದ್ಧದ ಹೆಸರಲ್ಲಿ ಕಾಳಸಂತೆಕೋರರು ಅಡುಗೆ ಎಣ್ಣೆ ದಾಸ್ತಾನು ಮಾಡಿಕೊಳ್ಳತೊಡಗಿದ್ದು, ಕೃತಕ ಅಭಾವ ಸೃಷ್ಟಿಸಿ ಬೆಲೆ ಏರಿಕೆ ಮಾಡತೊಡಗಿದ್ದಾರೆ ಎನ್ನಲಾಗಿದೆ. ದರ ಇನ್ನಷ್ಟು ಏರಿಕೆಯಾಗಬಹುದು ಎನ್ನುವ ಕಾರಣಕ್ಕೆ ಅನೇಕರು ಸೂರ್ಯಕಾಂತಿ ಎಣ್ಣೆ ಖರೀದಿಗೆ ಮುಗಿಬಿದ್ದಿದ್ದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ. ಹೀಗಾಗಿ ಕೆಲವೆಡೆ ಖರೀದಿಗೆ ಮಿತಿ ಹೇರಲಾಗಿದೆ.


Spread the love

About Laxminews 24x7

Check Also

ರಾಜ್ಯದ ಹಲವೆಡೆ ವರುಣನ ಅಬ್ಬರ – ಬಿಸಿಲ ಬೇಗೆಗೆ ಬೆಂದಿದ್ದ ಭೂಮಿಗೆ ತಂಪೆರೆದ ಆಲಿಕಲ್ಲು ಮಳೆ

Spread the loveಬೆಂಗಳೂರು: ರಾಜ್ಯದ ಹಲವೆಡೆ ವರುಣನ ಅಬ್ಬರ ಜೋರಾಗಿದ್ದು, ಕೊಡಗು, ಹಾಸನ ಸೇರಿದಂತೆ ಹಲವೆಡೆ ಕೆಲ ಜಿಲ್ಲೆಗಳಲ್ಲಿ ಮಳೆರಾಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ