Breaking News

ರಾಯಚೂರಿನ ಮುದಗಲ್ ಮೊಹರಂ ಆಚರಣೆಯನ್ನ ರದ್ದು ಮಾಡಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದರ್ಗಾಕ್ಕೆ

Spread the love

ರಾಯಚೂರು: ಕೊರೊನಾ ಹಿನ್ನೆಲೆ ಐತಿಹಾಸಿಕ ಪ್ರಸಿದ್ಧ ರಾಯಚೂರಿನ ಮುದಗಲ್ ಮೊಹರಂ ಆಚರಣೆಯನ್ನ ರದ್ದು ಮಾಡಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದರ್ಗಾಕ್ಕೆ ಬರುತ್ತಲೇ ಇದ್ದಾರೆ. ಇಂದು ಮೊಹರಂ ಒಂಬತ್ತನೆಯ ದಿನವಾದ್ದರಿಂದ ಸಾವಿರಾರು ಭಕ್ತರು ಆಗಮಿಸುತ್ತಲೇ ಇದ್ದಾರೆ. ರಾಜ್ಯದ ವಿವಿಧೆಡೆಯಿಂದ ಬಂದ ಭಕ್ತರು ದೀರ್ಘದಂಡ ನಮಸ್ಕಾರ ಹಾಕಿ ಹರಕೆ ಸಲ್ಲಿಸುತ್ತಿದ್ದಾರೆ. ಕೋವಿಡ್ ಭೀತಿಯನ್ನ ಮರೆತು ಭಕ್ತರು ತ್ಯಾಗಬಲಿದಾನದ ಸಂಕೇತವಾದ ಮೊಹರಂನ್ನ ಆಚರಿಸುತ್ತಿದ್ದಾರೆ.

ಪ್ರತಿ ವರ್ಷ ಮುದಗಲ್ ಮೊಹರಂಗೆ ದಕ್ಷಿಣ ಭಾರತದ ಹಲವು ಕಡೆಯಿಂದ ಲಕ್ಷಾಂತರ ಜನ ಬರುತ್ತಿದ್ದರು. ಈ ಬಾರಿ ಮುನ್ನೆಚ್ಚರಿಕೆಯಾಗಿ ಆಚರಣೆಯನ್ನ ಹುಸೇನ ಭಾಷಾ ದರ್ಗಾ ಕಮಿಟಿ ರದ್ದು ಮಾಡಿದೆ. ಮೊಹರಂ ಹಬ್ಬವನ್ನು ರದ್ದು ಪಡಿಸಿದರೂ ದರ್ಗಾಕ್ಕೆ ಜನ ಬರುತ್ತಿದ್ದಾರೆ. ದರ್ಗಾದ ಹೊರಗಡೆಯೇ ಪೂಜೆ ಸಲ್ಲಿಸಿ ಹೋಗುತ್ತಿದ್ದಾರೆ. ಬೆಳಗ್ಗೆಯಿಂದಲೂ ಜನರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಪ್ರತಿ ವರ್ಷ ಹಿಂದೂ, ಮುಸ್ಲಿಮರು ಸೇರಿ ಭಾವೈಕ್ಯದಿಂದ ಹತ್ತು ದಿನಗಳ ಕಾಲ ಮೊಹರಂ ಆಚರಣೆ ಮಾಡುತ್ತಿದ್ದರು. ಮುದಗಲ್ ಮೊಹರಂ ದಕ್ಷಿಣ ಭಾರತದಲ್ಲಿಯೇ ವಿಶಿಷ್ಟ ಆಚರಣೆ ಮೂಲಕ ಪ್ರಸಿದ್ಧಿ ಪಡೆದಿದೆ. ಆದ್ರೆ ಈ ವರ್ಷ ತ್ಯಾಗ ಬಲಿದಾನಗಳ ಸಂಕೇತವಾದ ಮೊಹರಂ ಆಚಣೆಯನ್ನ ಭಕ್ತರು ಮನೆಯಲ್ಲೇ ಮಾಡಿಕೊಳ್ಳಬೇಕಾಗಿದೆ.

ಮುದಗಲ್ ಮೊಹರಂ ಆಚರಣೆ ನೋಡಲು ರಾಜ್ಯ ಹಾಗೂ ಅಂತರಾಜ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ಜನ ಪ್ರತೀ ವರ್ಷ ಆಗಮಿಸುತ್ತಾರೆ. ಈ ವರ್ಷ ಕೊರೊನಾ ವೈರಸ್ ಸೋಂಕು ಹರಡುವಿಕೆ ಭೀತಿ ಹಿನ್ನೆಲೆಯಲ್ಲಿ ಸರ್ಕಾರದ ನಿಯಮವನ್ನು ಪಾಲನೆ ಮಾಡುವ ಉದ್ದೇಶದಿಂದ ಮೊಹರಂ ಆಚರಣೆಯನ್ನು ದರ್ಗಾ ಕಮಿಟಿ ನಿರ್ಣಯದಂತೆ ರದ್ದು ಮಾಡಲಾಗಿದೆ. ಇನ್ನೂ ಪ್ರತಿ ವರ್ಷ ಬೇರೆ ಜಿಲ್ಲೆಗಳಿಂದ ಆಲಂಗಳನ್ನು ಹೊತ್ತು ತಂದು ದೇವರ ಬಾವಿಯಲ್ಲಿ ತೊಳೆದುಕೊಂಡು ಹೋಗುತ್ತಿದ್ದ ಕಾರ್ಯವನ್ನು ಸಹ ನಿಷೇಧ ಮಾಡಲಾಗಿದೆ. ಬೇರೆ ಜಿಲ್ಲೆಯಿಂದ ಭಕ್ತರು ಆಲಂ ತರದಂತೆ ದರ್ಗಾ ಕಮಿಟಿ ಈ ಮೊದಲೇ ಮನವಿ ಮಾಡಿದೆ. ಆದರೂ ಭಕ್ತರು ಮಾತ್ರ ದರ್ಗಾಕ್ಕೆ ಬಂದು ಹರಕೆ ತೀರಿಸುತ್ತಿದ್ದಾರೆ.


Spread the love

About Laxminews 24x7

Check Also

ರಾಯಚೂರು: ಸರ್ಕಾರಿ ಶಾಲಾ ಕಟ್ಟಡಗಳ ದುರಸ್ತಿಗೆ ಆಗ್ರಹ

Spread the love ರಾಯಚೂರು: ಜಿಲ್ಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಶಾಲೆ ಕಟ್ಟಡಗಳನ್ನು ತಕ್ಷಣ ದುರಸ್ತಿ ಮಾಡಿಸಬೇಕು ಎಂದು ಒತ್ತಾಯಿಸಿ ಆಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ