ನವದೆಹಲಿ: ಮಾ.4ರಂದು ಚಂದ್ರನ ಮೇಲ್ಮೈ ಗೆ 3 ಟನ್ ತೂಕದ ರಾಕೆಟ್ ಒಂದು ಅಪ್ಪಳಿಸಲಿದೆ. ರಾಕೆಟೊಂದರ 2ನೇ ಹಂತದ ಭಾಗ ಬೀಳುತ್ತಿರಬಹುದು, ಇದರ ಪರಿಣಾಮ ಚಂದ್ರನಲ್ಲಿಯ ಶಾಂತಿ ಕದಡಲಿದೆ ಎಂದು ಖಗೋಳಶಾಸ್ತ್ರಜ್ಞ ಬಿಲ್ ಗ್ರೇ ಅಭಿಪ್ರಾಯಪಟ್ಟಿದ್ದಾರೆ.
ಒಂದು ಅಂದಾಜಿನ ಪ್ರಕಾರ, ಚೀನಾ 10 ವರ್ಷದ ಹಿಂದೆ ಬಾಹ್ಯಾಕಾಶಕ್ಕೆ ಹಾರಿಬಿಟ್ಟಿದ್ದ ನೌಕೆ ಇದಾಗಿರಬಹುದು. ಆದ್ದರಿಂದ ಇದು ಬೀಳುತ್ತಿದೆ ಎನ್ನಲಾಗಿದೆ. ಆದರೆ ಖಚಿತ ಕಾರಣ ಯಾರಿಗೂ ಗೊತ್ತಿಲ್ಲ. ಇದು ಅಪ್ಪಳಿಸಿದ ನಂತರ ಇಸ್ರೋದ ಚಂದ್ರಯಾನ-2 ಹಾಗೂ ನಾಸಾದ ಎಲ್‌ಆರ್‌ಒ ನೌಕೆಗಳು ಗುರ್ತಿಸಲಿವೆ. ಆಗ ಪರಿಸ್ಥಿತಿಯ ನಿಜವಾದ ಚಿತ್ರಣ ಸಿಗಲಿದೆ.