ನೆಲಮಂಗಲ: ವ್ಯವಸಾಯ ಮಾಡಿಕೊಂಡಿದ್ದ ವ್ಯಕ್ತಿಯೊಬ್ಬ ಮೋಜು ಮಸ್ತಿಗಾಗಿ ಬೈಕ್ ಕಳ್ಳತನಕ್ಕೆ ಇಳಿದು ನೆಲಮಂಗಲ ಟೌನ್ ಪೊಲೀಸರ ಅತಿಥಿಯಾಗಿದ್ದಾನೆ. ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ತಾಲೂಕಿನ ದೊಡ್ಡತರಹಳ್ಳಿಯ ಸುನಿಲ್ ಅಲಿಯಾಸ್ ಸುನಿ (29) ಬಂಧಿತ ಆರೋಪಿಯಾಗಿದ್ದು, ಈತನಿಂದ ಒಟ್ಟು 11ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಊರಲ್ಲಿ ವ್ಯವಸಾಯ ಮಾಡ್ಕೊಂಡಿದ್ದ ಆರೋಪಿ ಸುನೀಲ್ ಮೋಜು ಮಸ್ತಿಗಾಗಿ ಬೈಕ್ ಕಳ್ಳತನಕ್ಕೆ ಇಳಿದಿದ್ದ. ಈತ ನೆಲಮಂಗಲ, ಮಾದನಾಯಕನಹಳ್ಳಿ, ಪೀಣ್ಯ, ಹಾಸನ , ಮೈಸೂರು ಕಡೆಗಳಲ್ಲಿ ಬೈಕ್ ಕಳ್ಳತನ ಮಾಡಿ ಅಂತರ ಜಿಲ್ಲಾ ಮಟ್ಟದ ಬೈಕ್ ಕಳ್ಳನಾಗಿದ್ದ. ಸದ್ಯ ಆರೋಪಿಯನ್ನ ಬಂಧಿಸಿ ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ್ದಾರೆ.