Breaking News
Home / Uncategorized / ಅಜ್ಞಾತ ಸ್ಥಳದಲ್ಲಿ ಪುಟಿನ್ ಕುಟುಂಬ! ನ್ಯೂಕ್ಲಿಯರ್ ದಾಳಿಗೆ ಸಿದ್ಧತೆನಾ?

ಅಜ್ಞಾತ ಸ್ಥಳದಲ್ಲಿ ಪುಟಿನ್ ಕುಟುಂಬ! ನ್ಯೂಕ್ಲಿಯರ್ ದಾಳಿಗೆ ಸಿದ್ಧತೆನಾ?

Spread the love

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರಮಾಣು ದಾಳಿಗೆ ಎಲ್ಲಾ ರೀತಿಯಲ್ಲೂ ಸಿದ್ಧತೆ ಮಾಡ್ಕೊಳ್ತಿದ್ದಾರಾ ಅನ್ನೋ ಅನುಮಾನ ಮೂಡಿದೆ. ಯಾಕಂದ್ರೆ ಕಳೆದ ಕೆಲ ದಿನಗಳಿಂದ ವ್ಲಾಡಿಮಿರ್ ಪುಟಿನ್ ಕುಟುಂಬ ಸಾರ್ವಜನಿಕವಾಗಿ ಕಾಣಿಸಿಕೊಳ್ತಿಲ್ಲ.

ಅವರನ್ನು ಸೈಬೀರಿಯಾದ ಅಂಡರ್ ಗ್ರೌಂಡ್ ಸಿಟಿಯಲ್ಲಿ ಇರಿಸಿದ್ದಾರೆ ಅಂತ 61 ವರ್ಷದ ರಷ್ಯನ್ ಪ್ರೊಫೆಸರ್ ವಾಲೆರಿ ಸೊಲೋವೇ ಹೇಳಿಕೊಂಡಿದ್ದಾರೆ. ನ್ಯೂಕ್ಲಿಯರ್ ವಾರ್ ನಡೆದ್ರೆ ಅವರಿಗೆ ಏನೂ ಆಗಬಾರದು ಅನ್ನೋ ಕಾರಣಕ್ಕೆ ಅಲ್ಟೈ ಬೆಟ್ಟಗಳ ನಡುವೆ ಇರೋ ಲಕ್ಷುರಿ ಹೈಟೆಕ್ ಬಂಕರ್​ನಲ್ಲಿ ಕುಟುಂಬವನ್ನು ಇರಿಸಿದ್ದಾರೆ. ಇದು ಹೆಸರಿಗೆ ಮಾತ್ರ ಬಂಕರ್. ಆದ್ರೆ ಅಸಲಿಗೆ ಇದೊಂದು ಅಂಡರ್​ಗ್ರೌಂಡ್ ಸಿಟಿ.. ಇಲ್ಲಿ ಅತ್ಯಾಧುನಿಕ ವಿಜ್ಞಾನ, ತಂತ್ರಜ್ಞಾನ ಇದೆ.. ಈ ಪ್ರದೇಶ ಚೀನಾ, ಮಂಗೋಲಿಯಾ ಮತ್ತು ಕಜಕ್​ಸ್ತಾನದ ಬಾರ್ಡರ್​ನಲ್ಲಿದೆ ಅಂತ ಕೂಡ ಹೇಳಿಕೊಂಡಿದ್ದಾರೆ.. ಅಂದಹಾಗೆ ವಾಲೆರಿ ಸೊಲೋವೇ ಈ ಹಿಂದೆ ಮಾಸ್ಕೋ ಸ್ಟೇಟ್ ಇನ್​ಸ್ಟಿಟ್ಯೂಟ್ ಆಫ್ ಇಂಟರ್​​ನ್ಯಾಷನಲ್​​​​ ರಿಲೇಷನ್ಸ್​ನಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡಿದ್ರು. ಈ ಹಿಂದೆಯೂ ಇವರು ಪುಟಿನ್​​ಗೆ ಸಂಬಂಧಿಸಿದಂತೆ ವಿವಾದಿತ ಹೇಳಿಕೆ ಕೊಟ್ಟು ವಿಚಾರಣೆಗೆ ಒಳಪಟ್ಟಿದ್ರು. ಈ ಹಿಂದೆ ಇವರು ವ್ಲಾಡಿಮಿರ್ ಪುಟಿನ್ ಏನೋ ಸೀಕ್ರೆಟ್ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆದ್ರೆ ಅದನ್ನು ಜನರಿಂದ ಮುಚ್ಚಿಟ್ಟಿದ್ದಾರೆ.

ಇದೇ ವಿಚಾರವಾಗಿ ಇತ್ತೀಚೆಗೆ ರಕ್ಷಣಾ ಸಚಿವ ಸೆರ್ಜೀ ಶೊಯ್ಗು ಜೊತೆ ಭೂತ ಪ್ರೇತ ಬಿಡಿಸೋ ಆಚರಣೆಯೊಂದ್ರಲ್ಲಿ ಭಾಗಿಯಾಗಿದ್ರು ಅಂತ ಆರೋಪ ಮಾಡಿದ್ರು. ಕಳೆದ ವಾರವಷ್ಟೇ ಸೊಲೊವೇಯನ್ನು ಪುಟಿನ್ ಮಾನಸಿಕ ಆರೋಗ್ಯದ ಬಗ್ಗೆ ಮಾಡಿದ್ದ ಆರೋಪ ಸಂಬಂಧ ಅರೆಸ್ಟ್ ಮಾಡಿ ಸತತ 7 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಮನೆಯಲ್ಲಿ ಶೋಧಕಾರ್ಯ ನಡೆಸಿದ್ದ ಅಧಿಕಾರಿಗಳು, ಹಲವು ವಸ್ತುಗಳನ್ನು ಸೀಜ್ ಕೂಡ ಮಾಡಿದ್ರು. ನಂತರ ಸೊಲೊವೇ ಬಿಡುಗಡೆಯಾದ್ರೂ ಕೇಸ್ ಕ್ಲೋಸ್ ಆಗಿರಲಿಲ್ಲ. ಇನ್ನು ಪುಟಿನ್ ಫ್ಯಾಮಿಲಿ ಯಾರಂತ ಸೊಲೊವೇ ಮಾಹಿತಿ ನೀಡಿಲ್ಲ.. 


Spread the love

About Laxminews 24x7

Check Also

ರಾಜ್ಯದಲ್ಲಿ 7 ಹೊಸ ಕೃಷಿ ತರಬೇತಿ ಕೇಂದ್ರ;ಚಲುವರಾಯಸ್ವಾಮಿ

Spread the love ಬೆಳಗಾವಿ: ‘ರಾಜ್ಯದಲ್ಲಿ ಈ ವರ್ಷ ಏಳು ಜಿಲ್ಲೆಗಳಲ್ಲಿ ಹೊಸದಾಗಿ ಕೃಷಿ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗುವುದು’ ಎಂದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ