ಶಿವಮೊಗ್ಗ : ಹತ್ಯೆಯಾದ ಭಜರಂಗದಳದ ಕಾರ್ಯಕರ್ತ ಹರ್ಷನ ಮನೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ 24 ಗಂಟೆ ಒಳಗೆ ಹತ್ತು ಜನ ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಗೆ ಕುಮ್ಮಕ್ಕು ನೀಡಿದವರು ಯಾರು, ಯಾವ ಸಂಘಟನೆ ಈ ಘಟನೆ ಹಿಂದೆ ಇದೆ ಎಂದು ಮೂಲಕ್ಕೆ ಕೈಹಾಕಿ ಪೊಲೀಸರು ತನಿಖೆ ನಡೆಸುತಿದ್ದಾರೆ. ಹರ್ಷ ಕೊಲೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾದಾಗ ಮಾತ್ರ ಕುಟುಂಬಕ್ಕೆ ನ್ಯಾಯ ಸಿಕ್ಕಂತಾಗುತ್ತದೆ ಎಂದರು.
ಹರ್ಷ ಕೊಲೆ ಮಾತ್ರವಲ್ಲ, ರಾಜ್ಯದಲ್ಲಿ ಸಾಲು ಸಾಲು ಕೊಲೆಗಳು ನಡೆಯುತ್ತಿದೆ. ಯೋಜನಾಬದ್ಧವಾಗಿ ಹೇಗೆ ಲವ್ ಜಿಹಾದ್ ನಡೆಸುತ್ತಾರೆಯೋ, ಹಾಗೆಯೇ ಯೋಜನಾ ಬದ್ಧವಾಗಿ ಹಿಂದೂ ಧರ್ಮದ ಕೆಲಸದಲ್ಲಿ ತೊಡಗಿದವರನ್ನು ಹತ್ಯೆ ಮಾಡಲಾಗುತ್ತಿದೆ. ಕೇರಳದಲ್ಲಿ ಟಾರ್ಗೆಟ್ ಮಾಡಿ ಕೊಲೆ ಮಾಡುತ್ತಿರುವಂತೆ ಕರ್ನಾಟಕದಲ್ಲೂ ಹತ್ಯೆ ನಡೆಯುತ್ತಿದೆ ಎಂದು ದೂರಿದರು.
Laxmi News 24×7