ಬೆಳಗಾವಿ: ಕುಂದಾ ನಗರಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಹೋಟೆಲ್ ಒಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು, ಮೂವರನ್ನು ಬಂಧಿಸಿದ್ದಾರೆ.
ನಿಪ್ಪಾಣಿ ಹೊರವಲಯದ ಗೋಲ್ಡನ್ ಸ್ಟಾರ್ ಹೋಟೆಲ್ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿತ್ತು ಎಂಬ ಬಗ್ಗೆ ಖಚಿತ ಮಾಹಿತಿ ಪಡೆದು ನಿಪ್ಪಾಣಿ ನಗರ ಪೊಲೀಸರು ತಡ ರಾತ್ರಿ ದಾಳಿ ನಡೆಸಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಐವರು ಮಹಿಳೆಯರನ್ನು ರಕ್ಷಿಸಲಾಗಿದೆ.
ಬಂಧಿತರನ್ನು ಸಂಕೇಶ್ವರ ನಿವಾಸಿ ಸಂಜಯ ಭೈರಪ್ಪ ಮಾಳಿ (35), ಹುಕ್ಕೇರಿ ನಿವಾಸಿ ಅರುಣ್ ಜೈಪಾಲ ಶೇಕಣ್ಣವರ್ (34) ಹಾಗೂ ಪಿಂಪಲ್ ನಿವಾಸಿ ಪರಶುರಾಮ ಖಂಡೋಬಾ ಚವ್ಹಾಣ (35) ಎಂದು ತಿಳಿದುಬಂದಿದೆ.
ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.