Breaking News

ವಿದ್ಯಾರ್ಥಿನಿಯೊಬ್ಬಳ ಫೇಕ್ ಕಿಡ್ನಾಪ್‌ ಹಾಗೂ ರೇಪ್‌ ಪ್ರಕರಣವನ್ನು ಕೇವಲ 24 ಗಂಟೆಯೊಳಗೆ ಭೇದಿಸಿದ ಖಾಕಿ ಪಡೆ

Spread the love

ದಾವಣಗೆರೆ: ಪೊಲೀಸರ ನಿದ್ದೆಗೆಡಿಸಿದ್ದ ಡಿಪ್ಲೋಮಾ ಓದುತ್ತಿದ್ದ ಅಪ್ತಾಪ್ತ ವಿದ್ಯಾರ್ಥಿನಿಯೋರ್ವಳ ಫೇಕ್ ಕಿಡ್ನಾಪ್‌ ಹಾಗೂ ರೇಪ್‌ ಪ್ರಕರಣವನ್ನು ಕೇವಲ 24 ಗಂಟೆಯೊಳಗೆ ಖಾಕಿ ಪಡೆ ಭೇದಿಸಿದ್ದು, ಸುಳ್ಳು ಎಂಬುದನ್ನು ಸಾಬೀತು ಮಾಡಿದ್ದಾರೆ.

ಅನಗತ್ಯವಾಗಿ ಗೊಂದಲಕ್ಕೀಡು ಮಾಡುವ ಸಾಧ್ಯತೆಯಿದ್ದ ಪ್ರಕರಣಕ್ಕೆ ಪೊಲೀಸರಿಂದ ಸುಖಾಂತ್ಯ ಕಂಡಿದೆ.

ಶಿವಮೊಗ್ಗ ಮೂಲದ 16 ವರ್ಷದ ಬಾಲಕಿಯೊಬ್ಬಳು ಬೆಣ್ಣೆನಗರಿ ದಾವಣಗೆರೆಯಲ್ಲಿ ಹಾಸ್ಟೆಲ್‌ನಲ್ಲಿದ್ದುಕೊಂಡು ಡಿಪ್ಲೋಮಾ ಓದುತ್ತಿದ್ದಳು. ಇದೇ ತಿಂಗಳ 21ರಂದು ಅವಳು ಕಾಲೇಜಿಗೆ ಹೋಗುವ ವೇಳೆ ಮೂವರು ಕಿಡ್ನಾಪ್‌ ಮಾಡಿದ್ದಾರೆ. ಬಳಿಕ ಹೊನ್ನಾಳಿಯ ತುಂಗಭದ್ರಾ ನದಿ ಸಮೀಪ ಅತ್ಯಾಚಾರ ಎಸಗಿದ್ದಾರೆ ಎಂದು ವಿದ್ಯಾರ್ಥಿನಿಯು ತನ್ನ ಕುಟುಂಬದವರೊಂದಿಗೆ, ಅದೇ ದಿನ ಸಂಜೆ ದಾವಣಗೆರೆ ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದಳು.

ಅಪ್ರಾಪ್ತೆ ಫೇಕ್​ ಕಿಡ್ನಾಪ್​​, ರೇಪ್‌ ಪ್ರಕರಣದ ಬಗ್ಗೆ ಎಸ್​ಪಿ ಮಾಹಿತಿದೂರು ದಾಖಲಾಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು, ಬಾಲಕಿ ನೀಡಿದ ಪ್ರತಿಯೊಂದು ವಿವರಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದರು. ಆಗ ಅವರ ನೆರವಿಗೆ ಬಂದಿದ್ದು ಕಿಡ್ನಾಪ್‌ ಮಾಡಿದ್ದ ಬಗ್ಗೆ ಮೊಬೈಲ್‌ನಿಂದ ಯುವಕನೊಬ್ಬನಿಗೆ ಹೋಗಿದ್ದ ಸಂದೇಶ.

ಈ ಮೆಸೇಜ್‌ ಸ್ವೀಕರಿಸಿದ ಯುವಕ ಹಾಗೂ ಕಳುಹಿಸಲಾಗಿದ್ದ ಮೊಬೈಲ್‌ ಹೊಂದಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. 


Spread the love

About Laxminews 24x7

Check Also

ಮದ್ದೂರು ನಗರಸಭೆ ವ್ಯಾಪ್ತಿಗೆ ಗ್ರಾಪಂ ಗಳ ಸೇರ್ಪಡೆ ವಿವಾದ – ನಿರ್ಧಾರ ಕೈಬಿಡುವಂತೆ ಸಿಎಂಗೆ ಹೆಚ್‌ಡಿಕೆ ಪತ್ರ

Spread the loveಮಂಡ್ಯ: ಜಿಲ್ಲೆಯ ಮದ್ದೂರು  ತಾಲ್ಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳನ್ನ ಸ್ಥಳೀಯರ ಆಶಯಗಳಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ