Breaking News

9 ಕೋಟಿ ಜನತೆಗೆ ಉಚಿತ LPG ಸಂಪರ್ಕ : ನೀವು ಲಾಭ ಪಡೆಯಬಹುದು! ಹೇಗೆ? ಇಲ್ಲಿದೆ ನೋಡಿ

Spread the love

ನವದೆಹಲಿ : ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸರ್ಕಾರವು ಗೃಹಬಳಕೆಯ LPG ಸಂಪರ್ಕಗಳನ್ನು ಒದಗಿಸುತ್ತದೆ. ಈ ಯೋಜನೆಯಡಿಯಲ್ಲಿ, ದೇಶದ ಎಪಿಎಲ್, ಬಿಪಿಎಲ್ ಮತ್ತು ಪಡಿತರ ಚೀಟಿ ಹೊಂದಿರುವ ಮಹಿಳೆಯರಿಗೆ ಭಾರತ ಸರ್ಕಾರದಿಂದ ಉಚಿತ ಗ್ಯಾಸ್ ಸಂಪರ್ಕವನ್ನು ನೀಡಲಾಗುತ್ತದೆ.

ಈ ಯೋಜನೆಯಡಿ ಇದುವರೆಗೆ 9 ಕೋಟಿ ಜನರು ಉಚಿತ ಎಲ್‌ಪಿಜಿ ಸಂಪರ್ಕ ಪಡೆದಿದ್ದಾರೆ. ಇಂಡಿಯನ್ ಆಯಿಲ್ ತನ್ನ ಟ್ವಿಟರ್ ನಲ್ಲಿ ಈ ಕುರಿತು ಈ ಮಾಹಿತಿಯನ್ನು ನೀಡಿದೆ.

ಈ ಯೋಜನೆ(Pradhan Mantri Ujjwala Yojana)ಯನ್ನು 1 ಮೇ 2016 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದರು. ELPG ಗ್ಯಾಸ್ ಸಿಲಿಂಡರ್‌ನ ಪ್ರಯೋಜನವನ್ನು ನೀವು ಉಚಿತವಾಗಿ ಹೇಗೆ ಪಡೆಯಬಹುದು ಎಂಬುದನ್ನು ಇಲ್ಲಿದೆ ನೋಡಿ..

ಇದನ್ನೂ ಓದಿ : New Ration Card Rule: ಪಡಿತರ ತೆಗೆದುಕೊಳ್ಳುವ ನಿಯಮದಲ್ಲಿ ಭಾರಿ ಬದಲಾವಣೆ! ಹೊಸ ನಿಬಂಧನೆಗಳನ್ನು ತಿಳಿಯಿರಿ

ಈ ರೀತಿ ಅರ್ಜಿ ಸಲ್ಲಿಸಿ

– ಯೋಜನೆಯ ಲಾಭ ಪಡೆಯಲು, ಮೊದಲಿಗೆ pmujjwalayojana.com ಅಧಿಕೃತ ವೆಬ್‌ಸೈಟ್‌ಗೆ ಹೋಗಿ.
– ಇಲ್ಲಿ ಡೌನ್‌ಲೋಡ್ ಫಾರ್ಮ್ ಆಯ್ಕೆಯು ನಿಮ್ಮ ಮುಂದೆ ಕಾಣಿಸುತ್ತದೆ. ಅದನ್ನು ಡೌನ್‌ಲೋಡ್ ಮಾಡಿ.
– ಈಗ ಫಾರ್ಮ್‌ನಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ.
– ಇದರ ನಂತರ ಫಾರ್ಮ್ ಅನ್ನು LPG ಕೇಂದ್ರದಲ್ಲಿ ಸಲ್ಲಿಸಬೇಕಾಗುತ್ತದೆ.
– ಅಲ್ಲದೆ, ಸಂಬಂಧಿಸಿದ ದಾಖಲೆಗಳನ್ನು ಅಲ್ಲಿಯೂ ಸಲ್ಲಿಸಿ.
– ಫಾರ್ಮ್ ಅನ್ನು ಸಲ್ಲಿಸುವಾಗ, ನಿಮಗೆ 14.2 ಕೆಜಿ ಸಿಲಿಂಡರ್ ಬೇಕೇ ಅಥವಾ 5 ಕೆಜಿ ಸಿಲಿಂಡರ್ ಬೇಕೇ ಎಂಬುದನ್ನು ನೀವು ಸ್ಪಷ್ಟಪಡಿಸಬೇಕು.
ಪಿ ದಾಖಲೆಗಳನ್ನು ಪರಿಶೀಲಿಸಿದ ನಂತರ, ನೀವು LPG ಸಂಪರ್ಕ ಪಡೆಯುತ್ತೀರಿ.

ಯೋಜನೆಗೆ ಅಗತ್ಯವಾಜಿ ಬೇಕಾದ ದಾಖಲೆಗಳು

– ಬಿಪಿಎಲ್ ಕಾರ್ಡ್
– ಆಧಾರ್ ಕಾರ್ಡ್
– ಮೊಬೈಲ್ ನಂಬರ್
ಪಾಸ್ಪೋರ್ಟ್ ಸೈಜ್ ಫೋಟೋ
– ವಯಸ್ಸಿನ ಪ್ರಮಾಣಪತ್ರ
– ಬಿಪಿಎಲ್ ಪಟ್ಟಿಯಲ್ಲಿ ಹೆಸರಿರಬೇಕು
– ಬ್ಯಾಂಕ್ ಪಾಸ್ ಬುಕ್ ಫೋಟೋಕಾಪಿ
– ಪಡಿತರ ಚೀಟಿಯ ಫೋಟೋಕಾಪಿ

ಇದನ್ನೂ ಓದಿ : 24-02-2022 Today Gold Price: ಬಂಗಾರದ ಬೆಲೆಯಲ್ಲಿ ಭಾರೀ ಇಳಿಕೆ

ಈ ಷರತ್ತುಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು

– ಉಜ್ವಲಾ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಮೊದಲ ಷರತ್ತು ಅರ್ಜಿದಾರರು ಮಹಿಳೆಯಾಗಿರಬೇಕು.
– ಅರ್ಜಿದಾರ ಮಹಿಳೆಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಆಗ ಮಾತ್ರ ಈ ಯೋಜನೆಯ ಲಾಭ ಪಡೆಯಬಹುದು.
– ಮಹಿಳೆ ಬಿಪಿಎಲ್ ಕುಟುಂಬದವರಾಗಿರಬೇಕು.
– ಇದರೊಂದಿಗೆ ಮಹಿಳೆ ಬಿಪಿಎಲ್ ಕಾರ್ಡ್ ಮತ್ತು ಪಡಿತರ ಚೀಟಿ ಹೊಂದಿರುವುದು ಕಡ್ಡಾಯವಾಗಿದೆ.
– ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ LPG ಸಂಪರ್ಕ ಇರಬಾರದು.
– ನಿಮ್ಮ ವಿಳಾಸವನ್ನು ಸಾಬೀತುಪಡಿಸಲು ಸ್ವಯಂ ದೃಢೀಕರಿಸಿದ ಘೋಷಣೆಯ ನಮೂನೆಯನ್ನು ಸಲ್ಲಿಸಬೇಕು.


Spread the love

About Laxminews 24x7

Check Also

ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆ ನಿಮ್ಮ ನಂಬಿಕೆ ಉಳಿಸಿಕೊಂಡು, ತಾಲ್ಲೂಕಿನ ರೈತರು ಮತ್ತು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ

Spread the loveಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (BDCC) ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ