ಬೆಳ್ತಂಗಡಿ, ಫೆ. 25. ಇಲ್ಲಿನ ನಡ ಗ್ರಾಮದ ಕುತ್ರೊಟ್ಟು, ಸತ್ಯನಾರಾಯಣ ದೇವಾಲಯದಲ್ಲಿ ಸ್ಥಳೀಯ ಹಿಂದೂ ಯುವತಿಯ ವಿವಾಹವು ಉಡುಪಿ ಜಿಲ್ಲೆಯ ಮುಸ್ಲಿಂ ಯುವಕನೊಂದಿಗೆ ನಡೆದಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.
ವಿಷಯ ಹೊರಬರುತ್ತಲೇ ಹಿಂದೂ ಸಂಘಟನೆಗಳು ಈ ಬಗ್ಗೆ ಕಿಡಿಕಾರಿದ್ದು, ಅಲ್ಲದೇ ಅನ್ಯಕೋಮಿನ ವಿವಾಹ ಮಾಡಿಸಿ ಸಾಮರಸ್ಯಕ್ಕೆ ಧಕ್ಕೆ ತಂದಿರುವ ಕುರಿತು ನಗರ ಠಾಣೆಯಲ್ಲಿ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಪ್ರಕರಣ ದಾಖಲಿಸಿದೆ. ಸ್ಥಳೀಯ ಯುವತಿಯೋರ್ವಳು ಉಡುಪಿ ಬೈಂದೂರು ತಾಲೂಕಿನ ಸಫ್ವಾನ್ ಎಂಬವನೊಂದಿಗೆ ಇಲ್ಲಿನ ದೇವಾಲಯದಲ್ಲಿ ವಿವಾಹವಾಗಿದ್ದು, ಸಾಮರಸ್ಯ ಕದಡಿದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Laxmi News 24×7