Reena Dwivedi ಚುನಾವಣಾ ಮತಗಟ್ಟೆ ಅಧಿಕಾರಿ ರೀನಾ ದ್ವಿವೇದಿ ಅವರು ಕಳೆದ ಬಾರಿ ರಾತ್ರೋರಾತ್ರಿ ಇಂಟರ್‌ನೆಟ್ ಸೆನ್ಸೇಷನ್ ಆಗಿದ್ದರು. ಇದೀಗ2022 ರಲ್ಲಿ ಮತ್ತೊಮ್ಮೆ ಅವರು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಚರ್ಚೆಯ ಬಿಂದುವಾಗಿದ್ದಾರೆ.2017 ರ ವಿಧಾನಸಭೆ ಮತ್ತು 2019 ರ ಉತ್ತರ ಪ್ರದೇಶದ ಲೋಕಸಭೆ ಚುನಾವಣೆಯ ಸಮಯದಲ್ಲಿ ಲಖನೌದಲ್ಲಿ ಮತದಾನದ ಕರ್ತವ್ಯದ ಸಮಯದಲ್ಲಿ ಹಳದಿ ಸೀರೆ ಧರಿಸಿ ಸ್ಟೈಲಿಶ್ ಆಗಿ ಬಂದ ರೀನಾ ದ್ವಿವೇದಿಯ (Reena Dwivedi) ಫೋಟೊ ವೈರಲ್ ಆಗಿತ್ತು.
ಈಗ, ಅವರು ಬುಧವಾರ ನಡೆಯುತ್ತಿರುವಉತ್ತರ ಪ್ರದೇಶ ವಿಧಾನಸಭಾ ಚುನಾವಣೆ2022 ರ (UP Election) ನಾಲ್ಕನೇ ಹಂತದ ತಯಾರಿಯಲ್ಲಿದ್ದಾರೆ. ಬುಧವಾರ ನಡೆಯುತ್ತಿರುವ ನಾಲ್ಕನೇ ಹಂತದ ಮತದಾನದಲ್ಲಿ ರೀನಾ ಮೋಹನ್‌ಲಾಲ್‌ಗಂಜ್ ವಿಧಾನಸಭಾ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚುನಾವಣಾ ಮತಗಟ್ಟೆ ಅಧಿಕಾರಿ ರೀನಾ ದ್ವಿವೇದಿ ಅವರು ಕಳೆದ ಬಾರಿ ರಾತ್ರೋರಾತ್ರಿ ಇಂಟರ್‌ನೆಟ್ ಸೆನ್ಸೇಷನ್ ಆಗಿದ್ದರು. ಇದೀಗ2022 ರಲ್ಲಿ ಮತ್ತೊಮ್ಮೆ ಅವರು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಚರ್ಚೆಯ ಬಿಂದುವಾಗಿದ್ದಾರೆ. ರೀನಾ ದ್ವಿವೇದಿ ಅವರು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ 2022 ರಲ್ಲಿ ಚುನಾವಣಾ ಅಧಿಕಾರಿಗಳಲ್ಲಿ ಒಬ್ಬರು. ಫೆಬ್ರವರಿ 22 ರಂದು (ಮಂಗಳವಾರ) ಅವರು ಸ್ಲೀವ್ ಲೆಸ್ ಕಪ್ಪು ಟಾಪ್ ಮತ್ತು ಬೀಜ್ ಹೈ ವೇಸ್ಟ್ ಪ್ಯಾಂಟ್ ಧರಿಸಿ ಮೋಹನ್‌ಲಾಲ್‌ಗಂಜ್ ಮತಗಟ್ಟೆಗೆ ಆಗಮಿಸಿದರು. ಲಖನೌದ ಗೋಸೈಗಂಜ್ ಬೂತ್ ಸಂಖ್ಯೆ 114 ರ ಬಸ್ತಿಯಾದಲ್ಲಿನ ಮತದಾನ ಕೇಂದ್ರಕ್ಕೆ ಆಗಮಿಸುತ್ತಿದ್ದಾಗ ಮಾಧ್ಯಮಗಳು ಮತ್ತು ಅಭಿಮಾನಿಗಳು ಅವರ ಚಿತ್ರಗಳನ್ನು ಕ್ಲಿಕ್ ಮಾಡಿದ್ದಾರೆ. 2017ರ ಉತ್ತರ ಪ್ರದೇಶ ಚುನಾವಣೆಯಲ್ಲೂ ದ್ವಿವೇದಿ ಇಂಟರ್‌ನೆಟ್ ಸೆನ್ಸೇಷನ್ ಆಗಿದ್ದರು.
2019 ರಲ್ಲಿ ಹಳದಿ ಸೀರೆ ಧರಿಸಿ ಬಂದಿದ್ದ ಪಿಡಬ್ಲ್ಯುಡಿ ಅಧಿಕಾರಿಯ ಛಾಯಾಚಿತ್ರವನ್ನು ಚುನಾವಣಾ ಕರ್ತವ್ಯದಲ್ಲಿದ್ದಾಗ ಸಹೋದ್ಯೋಗಿಯೊಬ್ಬರು ಕ್ಲಿಕ್ ಮಾಡಿದ್ದಾರೆ.