ಬೆಂಗಳೂರು: ಮಾರ್ಚ್ 4ರಂದು ತಮ್ಮ ಸರಕಾರದ ಚೊಚ್ಚಲ ಬಜೆಟ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಲಿದ್ದಾರೆ. ಬಸವರಾಜ ಬೊಮ್ಮಾಯಿ ಅವರೇ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾರ್ಚ್ 4ರಂದು ತಾವು ಬಜೆಟ್ ಮಂಡನೆ ಮಾಡುವುದಾಗಿ ಹೇಳಿದರು.ಬಸವರಾಜ ಬೊಮ್ಮಾಯಿ ಅವರು ಹಣಕಾಸು ಖಾತೆಯನ್ನೂ ಸಹ ಹೊಂದಿದ್ದು, ಹೀಗಾಗಿ ಅವರೇ ಬಜೆಟ್ ಮಂಡನೆ ಮಾಡಲಿದ್ದಾರೆ.
ಇದರ ಮಧ್ಯೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಮಂಡಲ ಕಲಾಪವನ್ನು ಮಾರ್ಚ್ 4 ಕ್ಕೆ ಮುಂದೂಡಿದ್ದಾರೆ.
Laxmi News 24×7