Breaking News

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಪಂಕ್ಚರ್ ಪ್ರೂಫ್ ಟಯರ್..!

Spread the love

ಪ್ರಪಂಚದಾದ್ಯಂತ, ಪ್ರತಿ ವರ್ಷ ಸುಮಾರು 200 ಮಿಲಿಯನ್ ಟಯರ್ ಗಳು ಅಕಾಲಿಕ ಪಂಕ್ಚರ್‌ನಿಂದಾಗಿ ನಿರುಪಯುಕ್ತವಾಗುತ್ತವೆ. ರಸ್ತೆಯ ಮೇಲೆ ಬಿದ್ದಿರುವ ವಸ್ತುಗಳಿಂದ ಅಥವಾ ಅಸಮರ್ಪಕ ಗಾಳಿಯ ಒತ್ತಡದಿಂದ ಟೈರ್​ಗಳ ಹಾನಿಗೀಡಾಗುತ್ತದೆ.ವಾಹನ ಚಾಲಕರ ಮತ್ತು ಮಾಲೀಕರ ಸಮಸ್ಯೆಗಳಲ್ಲಿ ಟಯರ್ ಪಂಕ್ಚರ್ ಕೂಡ ಒಂದು.

ಯಾವಾಗ ಎಲ್ಲಿ ಕೈ ಕೊಡುತ್ತೊ ಎಂಬ ಚಿಂತೆಯೊಂದು ಕೆಲವೊಮ್ಮೆ ಕಾಡುತ್ತಿರುತ್ತವೆ. ಆದರೆ ಇನ್ನು ಕೆಲವೇ ವರ್ಷಗಳಲ್ಲಿ ನಿಮ್ಮ ವಾಹನದ ಟೈರ್ ಪಂಕ್ಚರ್ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಏಕೆಂದರೆ ಟಯರ್ ತಯಾರಕ ಕಂಪೆನಿ ಮಿಶೆಲೈನ್ ಪಂಕ್ಚರ್ ಪ್ರೂಫ್ ಟಯರ್‌ಗಳನ್ನು ಬಿಡುಗಡೆ ಮಾಡಲಿದೆ. ಶೆವರ್ಲೆಟ್​ ಬೋಲ್ಟ್ ಎಲೆಕ್ಟ್ರಿಕ್ ಕಾರಿಗೆ ಪಂಕ್ಚರ್ ಪ್ರೂಫ್ ಅಥವಾ ಗಾಳಿಯಿಲ್ಲದ ಟೈರ್‌ಗಳನ್ನು ಮಿಶೆಲೈನ್ ತಯಾರಿಸುತ್ತಿದೆ. ಮುಂದಿನ ಮೂರರಿಂದ ಐದು ವರ್ಷಗಳಲ್ಲಿ ಕಂಪನಿಯು ಹೊಸ ಟಯರ್ ಅನ್ನು ಇಡೀ ವಿಶ್ವದಾದ್ಯಂತ ಪರಿಚಯಿಸುವ ನಿರೀಕ್ಷೆಯಿದೆ.

ಮಿಶೆಲೈನ್ ಕಂಪೆನಿಯು ತನ್ನ ಗಾಳಿಯಿಲ್ಲದ ಟಯರ್ ಗಳನ್ನು ಪರೀಕ್ಷಿಸಲು ಈಗಾಗಲೇ 2019 ರಲ್ಲಿ ಬೋಲ್ಟ್ ಕಾರಿನಲ್ಲಿ ಬಳಸಿದೆ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ. Michelin 2019 ರಲ್ಲಿ ತನ್ನ ಗಾಳಿಯಿಲ್ಲದ ಟಯರ್ ಅಪ್ಟಿಸ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿರಬಹುದು, ಆದರೆ ಅದರ ಉತ್ಪಾದನಾ ಪ್ರಕ್ರಿಯೆಯು ಒಂದು ದಶಕದಿಂದ ನಡೆಯುತ್ತಿದೆ. ಮಿಶೆಲೈನ್ ಅಪ್ಟಿಸ್ ಬೆಲ್ಟ್ ಮತ್ತು ಸ್ಪೋಕ್‌ನಿಂದ ಮಾಡಲ್ಪಟ್ಟಿದೆ. ವಾಹನದ ಭಾರವನ್ನು ಸಾಗಿಸಲು ಹಲವಾರು ತೆಳುವಾದ ಮತ್ತು ಬಲವಾದ ಫೈಬರ್​ ಗ್ಲಾಸ್​ ಬಳಸಿ ಇದನ್ನು ತಯಾರಿಸಲಾಗುತ್ತದೆ.

ಮಿಶೆಲೈನ್ ತನ್ನ ಪಂಕ್ಚರ್-ಪ್ರೂಫ್ ಟಯರ್ ತಂತ್ರಜ್ಞಾನಕ್ಕಾಗಿ 50 ಪೇಟೆಂಟ್‌ಗಳನ್ನು ಸಹ ಸಲ್ಲಿಸಿದೆ. ಹೀಗಾಗಿ ಇದೇ ಮಾದರಿಯನ್ನು ಬೇರೆ ಯಾರೂ ಬಳಸಲಾಗುವುದಿಲ್ಲ. ಅಪ್ಟಿಸ್ ಟಯರ್ ಗಳ ಪ್ರಯೋಜನವೆಂದರೆ ಯಾವುದೇ ರೀತಿಯಲ್ಲೂ ಪಂಕ್ಚರ್‌ ಆಗುವುದಿಲ್ಲ. ಇದರಿಂದಾಗಿ ವಾಹನ ಚಲಾಯಿಸುವಾಗ ಟಯರ್ ಹಠಾತ್ ಪಂಕ್ಚರ್ ಆಗುವುದು ಅಥವಾ ಗಾಳಿ ಕಡಿಮೆಯಾಗುವ ಅಪಾಯ ಇರುವುದಿಲ್ಲ ಎಂದು ಕಂಪೆನಿ ಹೇಳಿಕೊಂಡಿದೆ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ