Breaking News

ಒಬ್ಬರಿಗೊಬ್ಬರು ಬಡಿದಾಡಿಕೊಂಡ ಪೊಲೀಸರು; ಆಸ್ಪತ್ರೆ ಸೇರುವಂಥದ್ದಾಗಿದ್ದೇನು?

Spread the love

ಧಾರವಾಡ: ಶಾಂತಿ ಸುವ್ಯವಸ್ಥೆ ಕಾಪಾಡಬೇಕಾಗಿದ್ದ ಪೊಲೀಸರೇ ಕಾನೂನನ್ನು ಕೈಗೆ ತೆಗೆದುಕೊಂಡು ಬಡಿದಾಡಿದ ಘಟನೆ ನಡೆದಿದೆ.  ಬೀಟ್​ ಡ್ಯೂಟಿಗೆ ತಡವಾಗಿ ಬಂದರು ಎಂಬ ಕಾರಣಕ್ಕೆ ಹೆಲ್ಮೆಟ್​ ಹಾಗೂ ಲಾಠಿಯಿಂದ ಒಬ್ಬರಿಗೊಬ್ಬರು ಬಡಿದಾಡಿಕೊಂಡ ಪ್ರಸಂಗ ನಡೆದಿದ್ದು, ಸದ್ಯ ಸಿದ್ದಪ್ಪ ಚಲುವಾದಿ ಅನ್ನೋರ  ತಲೆಗೆ ತೀವ್ರ ಪೆಟ್ಟಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಘಟನೆ ಹುಬ್ಬಳಿಯ ಶಹರ ಠಾಣೆಯಲ್ಲಿ ನಡೆದಿದ್ದು, ಪೊಲೀಸ್ ಕಾನ್​​ಸ್ಟೇಬಲ್ ಪ್ರಕಾಶ್​ ಗೋವಿಂದಪ್ಪನವರ ಮತ್ತು ಬೀಟ್ ಸಿಬ್ಬಂದಿ ಸಿದ್ದಪ್ಪ ಚಲುವಾದಿ ಇಬ್ಬರು ಹೆಲ್ಮೆಟ್​ ಹಾಗೂ ಲಾಠಿಗಳಿಂದ ಠಾಣೆಯಲ್ಲಿ ಬಡಿದಾಡಿಕೊಂಡಿದ್ದಾರೆ. ಅದಾದ ನಂತರ ಮತ್ತೊಮ್ಮೆ ಠಾಣೆಯ ಹಿಂಭಾಗಕ್ಕೆ ಹೋಗಿ ಮತ್ತೆ ಅಲ್ಲಿಯೂ ಕಿತ್ತಾಡಿಕೊಂಡಿದ್ದಾರೆ. ಈ ವೇಳೆ ಸಿದ್ದಪ್ಪನ ತಲೆಗೆ ಗಂಭೀರ ಗಾಯಗಳಾಗಿದ್ದು ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ.


Spread the love

About Laxminews 24x7

Check Also

ಮತ್ತೆ ಪಾಚಿಕಟ್ಟಿದ ಸುವರ್ಣ ಸೌಧ:

Spread the loveಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಬೆಳಗಾವಿಯ ಸುವರ್ಣ ವಿಧಾನಸೌಧ ಮತ್ತೆ ಪಾಚಿಕಟ್ಟಿದೆ. ಸ್ವಚ್ಛತೆಗೆ ಅನುದಾನ ಕೊರತೆ ಎದುರಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ