ಬೆಂಗಳೂರು: ವರದಕ್ಷಿಣೆ ಸಾವು ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡಿದ್ದ ಮೈಸೂರು ಜಿಲ್ಲಾ ನ್ಯಾಯಾಧೀಶರಿಗೆ ನ್ಯಾಯಾಂಗ ಅಕಾಡೆಮಿಯಲ್ಲಿ (Judicial Academy) ತರಬೇತಿ ನೀಡಲು ಹೈಕೋರ್ಟ್ (Karnataka High Court) ಆದೇಶಿಸಿದೆ! ಘೋರ ಅಪರಾಧ ಪ್ರಕರಣಗಳಲ್ಲಿ ಜಾಮೀನು ನೀಡುವ ಮುನ್ನ ನ್ಯಾಯಾಂಗ ವಿವೇಚನೆಯನ್ನು ಬಳಸುವುದು ಹೇಗೆಂಬುದನ್ನು ನ್ಯಾಯಾಧೀಶರು ಅರಿಯಬೇಕಿದೆ.
ಬೆಂಗಳೂರು: ವರದಕ್ಷಿಣೆ ಸಾವು ಪ್ರಕರಣದ ಆರೋಪಿಗಳಿಗೆ ಜಾಮೀನು ನೀಡಿದ್ದ ಮೈಸೂರು ಜಿಲ್ಲಾ ನ್ಯಾಯಾಧೀಶರಿಗೆ ನ್ಯಾಯಾಂಗ ಅಕಾಡೆಮಿಯಲ್ಲಿ (Judicial Academy) ತರಬೇತಿ ನೀಡಲು ಹೈಕೋರ್ಟ್ (Karnataka High Court) ಆದೇಶಿಸಿದೆ! ಘೋರ ಅಪರಾಧ ಪ್ರಕರಣಗಳಲ್ಲಿ ಜಾಮೀನು ನೀಡುವ ಮುನ್ನ ನ್ಯಾಯಾಂಗ ವಿವೇಚನೆಯನ್ನು ಬಳಸುವುದು ಹೇಗೆಂಬುದನ್ನು ನ್ಯಾಯಾಧೀಶರು ಅರಿಯಬೇಕಿದೆ. ಹೀಗಾಗಿ, ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರನ್ನು (Mysore District Judge) ತರಬೇತಿಗಾಗಿ ನ್ಯಾಯಾಂಗ ಅಕಾಡೆಮಿಗೆ ಕಳುಹಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಸುನಿಲ್ ಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ಧ ಪೀಠ ಈ ಮಹತ್ವದ ತೀರ್ಪು ನೀಡಿದೆ. ಇದೇ ವೇಳೆ ಪ್ರಕರಣದ ಆರೋಪಿಗಳಾದ ಮಂಜು (ಪತಿ) ಹಾಗೂ ಶಿವಮ್ಮಗೆ (ಅತ್ತೆ) ನೀಡಿದ್ದ ಜಾಮೀನು ರದ್ದುಪಡಿಸಿದೆ (Dowry Death).
ಪ್ರಕರಣದ ಹಿನ್ನೆಲೆ: ಮೈಸೂರಿನ ಪಿರಿಯಾಪಟ್ಟಣ ತಾಲ್ಲೂಕಿನ ಸುನಿತಾ ಹಾಗೂ ಮಂಜು ಮದುವೆ 2020ರ ಫೆಬ್ರವರಿ 16ರಂದು ನಡೆದಿತ್ತು. ಸುನಿತಾ ಪೋಷಕರು ಸಾಕಷ್ಟು ಒಡವೆ ಹಾಗೂ 3.5 ಲಕ್ಷ ರೂಪಾಯಿ ಹಣ ನೀಡಿ ಮದುವೆ ಮಾಡಿಕೊಟ್ಟಿದ್ದರು. ಮದುವೆಯಾದ ಎರಡು ತಿಂಗಳ ಬಳಿಕ ಮನೆ ನಿರ್ಮಾಣಕ್ಕಾಗಿ 6 ಲಕ್ಷ ರೂಪಾಯಿ ತರುವಂತೆ ಮಂಜು ಪತ್ನಿಗೆ ಒತ್ತಾಯಿಸಿದ್ದ. ಸುನಿತಾಳ ಅಕ್ಕನಿಗೆ ಪೋಷಕರು ಸಹಾಯ ಮಾಡಿದ ಹಿನ್ನೆಲೆಯಲ್ಲಿ ತಮ್ಮ ಮನೆಯ ನಿರ್ಮಾಣಕ್ಕೂ ಹಣ ತರುವಂತೆ ಜಗಳ ತೆಗೆದು ತವರಿಗೆ ಕಳುಹಿಸಿದ್ದ.
ಈ ವಿಚಾರವಾಗಿ ಸಂಬಂಧಿಕರು ಪಂಚಾಯ್ತಿ ನಡೆಸಿದ್ದರು. ನಂತರ ಪೋಷಕರು ಮನೆಗೆ ಟೈಲ್ಸ್ ಹಾಕಿಸಲು ನೆರವು ನೀಡುವ ಭರವಸೆ ನೀಡಿ, ಸುನಿತಾಳನ್ನು ಗಂಡನ ಮನೆಗೆ ಕಳುಹಿಸಿದ್ದರು. ಆದರೆ, ಬೆಳೆ ಕೈಕೊಟ್ಟಿದ್ದರಿಂದ ಕೊಟ್ಟಿದ್ದ ಭರವಸೆಯಂತೆ ಆರ್ಥಿಕ ನೀಡಲು ಸಾಧ್ಯವಾಗಿರಲಿಲ್ಲ. ಈ ವಿಚಾರವಾಗಿ ಸುನಿತಾಳಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲು ಪ್ರಾರಂಭಿಸಿದ್ದ ಪತಿ ಮಂಜು ತಂದೆಯ ಆಸ್ತಿಯಲ್ಲಿ ಪಾಲು ಕೇಳುವಂತೆ ಪೀಡಿಸುತ್ತಿದ್ದ. 2021ರ ಫೆಬ್ರವರಿ 14ರಂದು ಸುನಿತಾ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದರು. ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.