ಕಿರುತೆರೆಯ ಮೂಲಕ ಅಪಾರ ಅಭಿಮಾನಿಗಳ ಹೊಂದಿರುವ ನಟ ಕಿರಣ್ ರಾಜ್ ಇದೀಗ ‘ಬಡ್ಡೀಸ್’ ಹೆಸರಿನ ಚಿತ್ರದಲ್ಲಿ ನಟಿಸುತ್ತಿದ್ದು, ಯು.ಎಸ್.ಎ ವಾಸಿ ನಿಭಾ ಶೆಟ್ಟಿ ಈ ಚಿತ್ರದ ಮೂಲಕ ಸಿನಿಮಾಟೋಗ್ರಾಫರ್ ಆಗಿ ಸ್ಯಾಂಡಲ್ ವುಡ್ ಪ್ರವೇಶ ಮಾಡುತ್ತಿದ್ದಾರೆ. ಅಲ್ಲಿನ ಸಿನಿಮಾಗಳಿಗೆ ಹಾಗೂ ಜಾಹೀರಾತು ಚಿತ್ರಗಳಿಗೆ ಈಗಾಗಲೇ ನಿಭಾ ಶೆಟ್ಟಿ ಕೆಲಸ ಮಾಡಿದ್ದು, ಇವರು ಪ್ರತಿಷ್ಠಿತ ಎಮ್ಮಿ ಅವಾರ್ಡ್ ಗೆ ನಾಮಿನೇಟರ್ ಎನ್ನುವುದು ವಿಶೇಷ.
ಈಗಾಗಲೇ ಸಿನಿಮಾದ ಶೂಟಿಂಗ್ ಶುರುವಾಗಿದ್ದು ಬೆಂಗಳೂರು, ಮಂಗಳೂರು, ಗೋವಾ, ತುಮಕೂರು ಮುಂತಾದ ಕಡೆ ಚಿತ್ರೀಕರಣ ನಡೆಸಿದೆ. ಇನ್ನೂ ಕೆಲವೇ ದಿನಗಳಲ್ಲೇ ಫಸ್ಟ್ ಲುಕ್ ಕೂಡ ರಿಲೀಸ್ ಆಗಲಿದೆ ಎಂದಿದೆ ಚಿತ್ರತಂಡ.